ಬೆಂಗಳೂರು: ಕೊರೋನಾ ಕಾರಣ ಶಾಲೆಗಳನ್ನು ಆರಂಭಿಸಬಾಹದು ಎಂದು ರಾಷ್ಟ್ರೀಯ ಮಟ್ಟದಲ್ಲಿ ಪೋಷಕರು ಆಂದೋಲನೆ ನಡೆಸುತ್ತಿರುವ ನಡುವಲ್ಲೇ ಸರ್ಕಾರ ರಾಜ್ಯದಲ್ಲಿ ಶಾಲೆಗಳನ್ನು ಜುಲೈ 1ರಿಂದ ಆರಂಭಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದಕ್ಕಾಗಿ ಪೂರ್ವ ಪ್ರಾಥಮಿಕ (ಪ್ರಿಕೆಜಿ, ಎಲ್’ಕೆಜಿ, ಯುಕೆಜಿ) ಹಂತವೂ ಸೇರಿದಂತೆ ಶಾಲೆಗಳ ಆರಂಭಕ್ಕೆ ಕರಡು ವೇಳಾಪಟ್ಟಿ ಕೂಡ ಪ್ರಕಟಿಸಿದ್ದು, ಈ ಪ್ರಕಾರ ಜುಲೈ.1ರಿಂದ ಜುಲೈ20ರವರೆಗೆ 3 ಹಂತಗಳಲ್ಲಿ ಮಕ್ಕಳಿಗೆ ಶಾಲೆ ಆರಂಭಿಸುವ ಚಿಂತನೆ ನಡೆಸಿದೆ. ಜುಲೈ.1ರಿಂದ 4-7 ತರಗತಿ, 1-3 ಜುಲೈ 15 ಮತ್ತು 8-10 ತರಗತಿ ಜುಲೈ 15ರಿಂದ, ಪೂರ್ವ ಪ್ರಾಥಮಿಕ ಶಾಲೆಯನ್ನು ಜುಲೈ 20ರಿಂದ ಆರಂಭಿಸಲು ನಿರ್ಧರಿಸಿದೆ.
ನೂತನ ಶೈಕ್ಷಣಿಕ ವರ್ಷದಲ್ಲಿ ತರಗತಿಯ ಒಟ್ಟಾರೆ ಸಂಖ್ಯಾಬಲವನ್ನು ಎರಡು ಭಾಗವಾಗಿ ವಿಭಾಗಿಸಿ ಎರಡು ಬ್ಯಾಚ್ ಗಳಂತೆ ತರಗತಿ ನಡೆಸಬೇಕಾಗಿದ್ದು, ಬೆಳಿಗ್ಗೆ 8-12 ಮತ್ತು ಮಧ್ಯಾಹ್ನ 1-5 ಗಂಟೆಗಳ ಕಾಲ ಶಾಲೆಗಳನ್ನು ನಡೆಸಬೇಕಿದೆ.
ಇದಕ್ಕಾಗಿ ಅಭಿಪ್ರಾಯ ಆಹ್ವಾನಿಸಲಾಗಿದೆ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಜೂ.5ರಿಂದ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗ ಕರ್ತವ್ಯಕ್ಕೆ ಹಾಜರಾಗಿ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಜೂನ್.8 ರಿಂದ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಅವಕಾಶ ನೀಡಿದೆ.
ಇದೇ ವೇಳೆ ಶಾಲೆ ಆರಂಭಿಸುವ ಬಗ್ಗೆ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಶಾಲೆಗಳು ಜೂ.10ರಿಂದ 12ರವರೆಗೆ ನಡೆಸಬೇಕು. ಈ ಸಮಾಲೋಚನಾ ಸಭೆ ನಡೆಸಿ, ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಆರಂಭದ ದಿನಾಂಕ ನಿರ್ಧರಿಸಲು ತೀರ್ಮಾನಿಸಿದೆ.
ಸಮಾಲೋಚನಾ ಪ್ರಕ್ರಿಯೆ 2 ಹಂತದಲ್ಲಿ ನಡೆಯಲಿದೆ. ಹಂತ 1 ರಲ್ಲಿ ಶಿಕ್ಷಮ ಸಚಿವರು ಪೋಷಕರು, ಸರ್ಕಾರ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸದಸ್ಯರು, ಶಿಕ್ಷಣ ತಜ್ಞರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವರು.
Follow us on Social media