Breaking News

ಜನಪ್ರಿಯ ಫೈಲ್ ಶೇರಿಂಗ್ ಆಪ್ ವಿ-ಟ್ರಾನ್ಸ್ ಫರ್’ ಗೆ ನಿಷೇಧ ಹೇರಿದ ಸರ್ಕಾರ

ನವದೆಹಲಿ : ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ ವಿ-ಟ್ರಾನ್ಸ್ ಫರ್ ಅನ್ನು ಭಾರತೀಯ ದೂರ ಸಂಪರ್ಕ ಇಲಾಖೆ (ಡಿಓಟಿ) ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಿ ನಿರ್ಬಂಧ ಹೇರಲಾಗಿದೆ.

ವರದಿಗಳ ಪ್ರಕಾರ ವಿ-ಟ್ರಾನ್ಸ್ ಫರ್ ವೆಬ್‌ಸೈಟ್ ಅನ್ನು ನಿಷೇಧಿಸುವಂತೆ DoT ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ಕಳುಹಿಸಿದೆ.

ವಿ-ಟ್ರಾನ್ಸ್ ಫರ್ ಎಂಬುದು ಜನಪ್ರಿಯ ಫೈಲ್ ಹಂಚಿಕೆ ವೆಬ್‌ಸೈಟ್ ಆಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ 1GB ಗಿಂತ ಹೆಚ್ಚಿನ ಇಮೇಲ್‌ಗಳಲ್ಲಿ ಫೈಲ್‌ಗಳನ್ನು ವರ್ಗಾಯಿಸಲು ವಿ-ಟ್ರಾನ್ಸ್ ಫರ್ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿತ್ತು. ಇದರ ಮೂಲಕ ಬಳಕೆದಾರರು ವೀಡಿಯೊಗಳು ಮತ್ತು ಇಮೇಜ್‌ಗಳನ್ನು ಒಳಗೊಂಡಂತೆ ಭಾರೀ ಫೈಲ್‌ಗಳನ್ನು ಕಳುಹಿಸಬಹುದಾಗಿತ್ತು.ಇದು ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು. ವಿ-ಟ್ರಾನ್ಸ್ ಫರ್ ನಲ್ಲಿ ಪ್ರತ್ಯೇಕ ಖಾತೆಯನ್ನು ರಚಿಸುವ ಅಗತ್ಯವಿರಲಿಲ್ಲ. ನೇರವಾಗಿ ಸ್ವೀಕರಿಸುವವರ ಇಮೇಲ್‌ಗೆ 2GB ವರೆಗೆ ಫೈಲ್‌ಗಳನ್ನು ಕಳುಹಿಸಲು ಅವಕಾಶವಿತ್ತು. ಆದರೆ ವಿ-ಟ್ರಾನ್ಸ್‌ಫರ್ ಫೈಲ್ ಶೇರಿಂಗ್ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅದರಲ್ಲಿ ಸೂಕ್ಷ್ಮ ಮಾಹಿತಿಯನ್ನು ಕಳುಹಿಸಿದರೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವಾಲಯ ಅದರ ಸೇವೆ ಉಪಯೋಗಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಆದರೂ ಏಕೆ ನಿಷೇಧಿಸಲಾಗಿದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

ವಿ-ಟ್ರಾನ್ಸ್ ಫರ್ ನೆದರ್ಲೆಂಡ್‌ನ ಅಮ್‌ಸ್ಟರ್‌ ಡಾಂನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರಲ್ಲಿ ಸಾಮಾನ್ಯ ಸೇವೆ ಉಚಿತವಾಗಿದ್ದು, ಹೆಚ್ಚಿನ ಗಾತ್ರದ ಫೈಲ್ ಕಳುಹಿಸುವ ಪ್ರೀಮಿಯಂ ಸೇವೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಉಚಿತ ಸೇವೆಗಾದರೆ 2 ಜಿಬಿ ಮಿತಿ, ಅದಕ್ಕಿಂತ ಹೆಚ್ಚಿನ ಫೈಲ್ ಗಾತ್ರವಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×