ನವದೆಹಲಿ, : ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50ರೂ. ಹೆಚ್ಚಳ ಮಾಡಲಾಗಿದೆ.
- ಹೀಗಾಗಿ 14.2 ಕೆ.ಜಿ.ಯ ದೇಶೀಯ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆ ಹೆಚ್ಚಾಗಲಿದ್ದು,ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಈಗ 1053 ರೂ.ಗೆ ಲಭ್ಯವಾಗಲಿದೆ.14.2 ಕೆಜಿ ಸಿಲಿಂಡರ್ ಜೊತೆಗೆ, 5 ಕೆಜಿಯ ಸಣ್ಣ ದೇಶೀಯ ಸಿಲಿಂಡರ್ ಗಳ ಬೆಲೆಯೂ ಹೆಚ್ಚಾಗಿದೆ. ಇದರ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 18ರೂ.ಗಳಷ್ಟು ಹೆಚ್ಚಿಸಲಾಗಿದೆ.ಮತ್ತೊಂದೆಡೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 8.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ.