ಸಿಡ್ನಿ : ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಏಕದಿನ ಪಂದ್ಯವನ್ನು ಪೂರ್ಣಗೊಳಿದ್ದವು. ಆದರೆ, ಸಾಮಾನ್ಯವಾಗಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಹೊಸ ಜೋಶ್ನೊಂದಿಗೆ ಆಡುತ್ತಿದ್ದ ಆಟಗಾರರಿಗೆ ಮುಚ್ಚಿದ ಕ್ರೀಡಾಂಗಣದಲ್ಲಿ ಆಡಿದ್ದರಿಂದ ಎಲ್ಲವೂ ಹೊಸದೆನಿಸಿತ್ತು.
ಕಳೆದ ಶುಕ್ರವಾರ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದ ಬಳಿಕ ನ್ಯೂಜಿಲೆಂಡ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಬಳಿಕ, ಕೋವಿಡ್-19 ಸೋಂಕು ತಗುಲಿರಬಹುದೆಂಬ ಸಂಶಯದಿಂದಾಗಿ ಅವರನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಇದರಿಂದಾಗಿ ತಂಡದಲ್ಲಿದ್ದ ಕೊರೊನಾ ವೈರಸ್ ಭೀತಿ ದೂರವಾಯಿತು.
ಈ ಬಗ್ಗೆ ಮಾತನಾಡಿದ್ದ ಲಾಕಿ ಫರ್ಗ್ಯೂಸನ್, “ನನ್ನಲ್ಲಿ ಶೀತದ ಲಕ್ಷಣಗಳು ಕಾಣಿಸಿಕೊಂಡಿತ್ತು. ಹಾಗಾಗಿ, ತಂಡದ ಸಹಾಯಕ ಸಿಬ್ಬಂದಿ ನನ್ನನ್ನು ಸಮರ್ಪಕವಾಗಿ ನಿರ್ವಹಿಸಿದ್ದರು.