ಉಡುಪಿ: ಈ ತಿಂಗಳ 27 ರೊಳಗೆ ಕೊವಿಡ್-19ನ ಹೊಸ ಪ್ರಕರಣಗಳು ವರದಿಯಾಗದಿದ್ದರೆ ಉಡುಪಿ ಜಿಲ್ಲೆಯನ್ನು ‘ಹಸಿರು ವಲಯ’ವಾಗಿ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.
ಸಂಪೂರ್ಣವಾಗಿ ಗುಣಮುಖರಾದ ಮೂವರು ಕೋವಿಡ್ -19 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಶುಕ್ರವಾರ ಕೊವಿಡ್ -19 ನಿಂದ ಗುಣಮುಖರಾದ ಭಟ್ಕಳ ಮೂಲದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮೊದಲ ಕೊವಿಡ್ -19 ಪ್ರಕರಣ ಮಾರ್ಚ್ 25 ರಂದು ದೃಢಪಟ್ಟಿತ್ತು. ಸರಿಯಾಗಿ ಒಂದು ತಿಂಗಳ ನಂತರ ಏಪ್ರಿಲ್ 25 ರಂದು ಜಿಲ್ಲೆಯು ಕೊವಿಡ್ -19 ಮುಕ್ತ ಜಿಲ್ಲೆಯಾಗುವತ್ತ ಸಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 3,238 ಜನರು ಕೊರೋನಾ ವೈರಸ್ ಸೋಂಕು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 1,929 ಜನರು 28 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ್ದರೆ, 2,512 ಜನರು 14 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ್ದಾರೆ.
ಸದ್ಯ, 50 ಮಂದಿ ಪ್ರತ್ಯೇಕ ವಾರ್ಡ್‌ನಲ್ಲಿದ್ದರೆ 273 ಜನರನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 1,024 ಗಂಟಲಿನ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. 947 ಮಾದರಿಗಳಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಉಳಿದಂತೆ 74 ಪರೀಕ್ಷಾ ವರದಿಗಳನ್ನು ಕಾಯಲಾಗುತ್ತಿದೆ.
Follow us on Social media