ಕೊರೋನಾದಿಂದ ಒಂದಷ್ಟು ಉದ್ಯಮಗಳು ನಷ್ಟ ಎದುರಿಸುತ್ತಿದ್ದರೆ, ಜೂಮ್ ಆಪ್ ಮಾತ್ರ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದೆ.
ಕೋವಿಡ್-19 ತಡೆಗೆ ಲಾಕ್ ಡೌನ್ ವಿಧಿಸಿದ್ದರ ಪರಿಣಾಮವಾಗಿ ಜೂಮ್ ಆಪ್ ಬಳಕೆ ಮಾಡುವವರ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕಿಂತ 30 ಪಟ್ಟು ಗ್ರಾಹಕರು ಅತ್ಯಂತ ಕಡಿಮೆ ಅವಧಿಯಲ್ಲಿ ಜೂಮ್ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ.
2020 ರ ಏಪ್ರಿಲ್ ವೇಳೆಗೆ ಜೂಮ್ ಹೊಸದಾಗಿ 300 ಮಿಲಿಯನ್ ಬಳಕೆದಾರರನ್ನು ಜಾಗತಿಕವಾಗಿ ಪಡೆದಿದ್ದು, ವಿಶ್ಲೇಷಕರು ಹಾಗೂ ಸ್ವತಃ ತನ್ನ ಅಂದಾಜಿಗಿಂತಲೂ ಹೆಚ್ಚಿನ ಆದಾಯವನ್ನು ಮೊದಲ ತ್ರೈಮಾಸಿಕದಲ್ಲಿ ಗಳಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿಯ ಆದಾಯ 122 ಮಿಲಿಯನ್ ಡಾಲರ್ ನಿಂದ ಶೇ.328.2 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು ಶೇ.169 ರಷ್ಟು ಆದಾಯ ಹೆಚ್ಚಿದೆ.
ಲಾಕ್ ಡೌನ್ ವಿಧಿಸಿದ್ದರ ಪರಿಣಾಮವಾಗಿ ವೆಬಿನಾರ್ ಗಳು, ವಿಡಿಯೋ ಕಾನ್ಫರೆನ್ಸ್ ಗಳು ಹೆಚ್ಚಿದ್ದು, ರಾತ್ರೋರಾತ್ರಿ ನೂರಾರು ಮಿಲಿಯನ್ ಬಳಕೆದಾರರನ್ನು ಜೂಮ್ ಗಳಿಸಿದ್ದು, ಪೇಯ್ಡ್ ಗ್ರಾಹಕರಿಗೆ ಇನ್ನೂ ಉತ್ತಮವಾದ ಎನ್ಕ್ರಿಪ್ಷನ್ ನೀಡುವುದಾಗಿ ಜೂಮ್ ಹೇಳಿದೆ.
Follow us on Social media