ಬೆಂಗಳೂರು: ಕೊರೋನಾ ವೈರಾಣು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ನಲ್ಲಿರುವ ಚಲನಚಿತ್ರ ಕಾರ್ಮಿಕರಿಗೆ ಸ್ಯಾಂಡಲ್ ವುಡ್ ‘ಬುದ್ಧಿವಂತ’ ನಟ ಉಪೇಂದ್ರ ನೆರವು ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ವ್ಯಾಪ್ತಿಗೆ ಬರುವ 18 ಸಂಘಗಳಿಗೆ ನಟ ಉಪೇಂದ್ರ ಪ್ರತ್ಯೇಕವಾಗಿ ಚೆಕ್ ಗಳನ್ನು ವಿತರಿಸಿದರು.
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಗೌರವಾಧ್ಯಕ್ಷ ಸಾ ರಾ ಗೋವಿಂದು, ಉಪಾಧ್ಯಕ್ಷ ರವಿಶಂಕರ್ ಅವರಿಗೆ ಈ ಚೆಕ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆ ಎಂ ವೀರೇಶ್ ಉಪಸ್ಥಿತರಿದ್ದರು.
Follow us on Social media