Breaking News

ಕೆಎಸ್ಆರ್‌ಟಿಸಿ ಸಿಬ್ಬಂದಿ ವೇತನ ಕಡಿತವಿಲ್ಲ:ಮೂರು‌ತಿಂಗಳ ವೇತನ ಸರ್ಕಾದಿಂದಲೇ ಪಾವತಿ

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಸಾರಿಗೆ‌ ನಿಗಮಗಳು ಆದಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು‌ ಸಾಧ್ಯವಾಗದ ಸ್ಥಿತಿ ಎದುರಾಗಿರುವ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ವೇತನವನ್ನು ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಗಿದೆ.
ಪ್ರಥಮ ಹಂತದ ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆಗೆ ಉಂಟಾಗಿರುವ ನಷ್ಟ 1200 ಕೋಟಿ ನಷ್ಟ,ಕೆಎಸ್ಆರ್‌ ಟಿಸಿ,ಬಿಎಂಟಿಸಿ,ಈಶಾನ್ಯ ಸಾರಿಗೆ ಹಾಗು ವಾಯುವ್ಯ ಸಾರಿಗೆ ನಿಗಮಗಳಿಗೆ ಆದಾಯವೇ ಇಲ್ಲದಂತಾಗಿದೆ,ಪ್ರಯಾ ಣಿಕರ ಟಿಕೆಟ್ ಹಣವೇ ಸಿಬ್ಭಂದಿ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಆದರೆ ಈಗ ಬಸ್ ಸಂಚಾರ ಇಲ್ಲದೇ ಆದಾಯವೇ ಇಲ್ಲವಾಗಿದೆ. ಆದರೆ ನಮ್ಮ ಜನರ ಹಾಗೂ ಸಿಬ್ಬಂದಿಗಳ ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನಕ್ಕೆ ಸಮಸ್ಯೆಯಾಗದಂತೆ ಸರ್ಕಾರದಿಂದಲೇ ವೇತನ ಪಾವತಿ ಮಾಡಲಾಗುವುದು ಎಂದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಯ ನೀಡಿದ್ದು ವೇತನ ಕಡಿತದಂತಹ ಭೀತಿಯಲ್ಲಿದ್ದ ಸಾರಿಗೆ ನಿಗಮದ‌ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಒಟ್ಟಿಗೆ 3 ತಿಂಗಳ ವೇತನ ನೀಡಲು 1050 ಕೋ.ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಸದ್ಯಕ್ಕೆ 1 ತಿಂಗಳ ವೇತನ ಪಾವತಿಗೆ ಮುಖ್ಯಮಂತ್ರಿಗಳು ತಾತ್ವಿಕ ಅನುಮತಿ ನೀಡಿದ್ದಾರೆ ಹಾಗಾಗಿ ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪಾವತಿ ವಿಚಾರದಲ್ಲಿ ಆತಂಕಗೊಳ್ಳುವುದು ಬೇಡ, ನಿಗದಿಯಂತೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಾಗುತ್ತದೆ,ಸಾರಿಗೆ ಬಸ್ ಗಳ ಸಂಚಾರ ಪೂರ್ಣ ಒ್ರಮಟಣದಲ್ಲಿ ಕಾರ್ಯಾಚರಣೆ ಆರಂಭಿಸಲು ವಿಳಂಬವಾಗಬಹುದು ಆದರೂ ಮುಂದಿನ ಎರಡು ತಿಂಗಳ ವೇತನವನ್ನು ಮುಂದಿನ ದಿನಗಳಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಯ ನೀಡಿದ್ದಾರೆ.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×