Breaking News

ಕುಪ್ವಾರಾ ಮತ್ತು ಪುಲ್ವಾಮಾದಲ್ಲಿ ಭದ್ರತಾಪಡೆ ಕಾರ್ಯಾಚರಣೆ, ಮೂವರು ಉಗ್ರರ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಮತ್ತು ಪುಲ್ವಾಮಾ ಜಿಲ್ಲೆಗಳಿಂದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ)  ಗೆ ಸೇರಿದ್ದ ಮೂವರು ಉಗ್ರರನ್ನು ಬಂಧಿಸಲಾಗಿದ್ದು ಅಪಾರ ಪ್ರಮಾಣದ  ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರಾದಿಂದ ಇಬ್ಬರನ್ನು ಬಂಧಿಸಿದರೆ, ಒಬ್ಬನನ್ನು ದಕ್ಷಿಣದ ಪುಲ್ವಾಮಾದಲ್ಲಿ ಬಂಧಿಸಲಾಗಿದೆ.

ಪೊಲೀಸರು ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಕುಪ್ವಾರಾದ ಹಂದ್ವಾರಾದಲ್ಲಿ  ನಿಷೇಧಿತ  ಎಲ್‌ಇಟಿ ಜತೆ ಸಂಪರ್ಕ ಹೊಂದಿರುವ ಇಬ್ಬರು ಉಗ್ರಗಾಮಿ ಸಹಚರರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರಗಾಮಿ ಸಹಚರರನ್ನು ಟ್ರೆಹ್ರಮ್ ಕುಪ್ವಾರಾದ ಹಯಾನ್ ಪ್ರದೇಶದ ನಿವಾಸಿಗಳಾದ ಲಿಯಾಕತ್ ಅಹ್ಮದ್ ಮಿರ್ ಮತ್ತು ಅಕಿಬ್ ರಶೀದ್ ಮಿರ್ ಎಂದು ಗುರುತಿಸಲಾಗಿದೆ.  ಪೊಲೀಸ್ ದಾಖಲೆಗಳ ಪ್ರಕಾರ, ಅವರು ಸಕ್ರಿಯ ಎಲ್‌ಇಟಿ ಉಗ್ರರಿಗೆ ಆಶ್ರಯ, ಮತ್ತಿತರೆ ಬೆಂಬಲವನ್ನು ನೀಡುವಲ್ಲಿ ಭಾಗಿಯಾಗಿದ್ದರು, ಜೊತೆಗೆ ದಕ್ಷಿಣ ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸಲು ಸಹಾಯ ಮಾಡಿದರು ಎಂದು ಅಧಿಕಾರಿ ಹೇಳಿದರು.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಹಂದ್ವಾರಾ  ಪಟ್ಟಣದ ವಿವಿಧ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಯಿತು.ಆಗ  ಚಿನಾರ್ ಪಾರ್ಕ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ಇಬ್ಬರನ್ನು ಪತ್ತೆಹಚ್ಚಲಾಗಿದೆ. ಅವರು ಪಲಾಯನ ಮಾಡಲು ಪ್ರಯತ್ನಿಸಿದರು ಆದರೆ ಭದ್ರತಾ ಪಡೆ ಅವರನ್ನು ಬಂಧಿಸಿದೆ. ಅವರ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಅವರಿಂದ ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ಪ್ರಕರಣದಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು

ಏತನ್ಮಧ್ಯೆ, ಇನ್ನೊಬ್ಬ ಉಗ್ರ ಸಹಚರನನ್ನು, ಅವಂತಿಪೋರಾದ ಡೇಂಜರ್‌ಪೊರಾ ನೂರ್‌ಪೊರಾ ಪ್ರದೇಶದ ನಿವಾಸಿ ಫಿರ್ದಸ್ ಅಹ್ಮದ್ ದಾರ್ ಎಂದು ಗುರುತಿಸಲಾಗಿ ಈತನನ್ನು ಅವಂತಿಪೋರಾ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ  ಇತರೆ ವಸ್ತುಗಳನ್ನು ಆತನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ಅವುಗಳನ್ನು  ದಾಖಲೆಗಳಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ

ಪೊಲೀಸ್ ದಾಖಲೆಗಳ ಪ್ರಕಾರ, ಸಕ್ರಿಯ ಹಿಜ್ಬುಲ್  ಉಗ್ರರಿಗೆ ಆಶ್ರಯ, ಲಾಜಿಸ್ಟಿಕ್ ಮತ್ತು ಇತರ ಬೆಂಬಲವನ್ನು ನೀಡುವಲ್ಲಿ ದಾರ್ ಸಹಾಯಕನಿದ್ದನು. ಜೊತೆಗೆ ಅವಂತಿಪೋರಾ ಮತ್ತು ತ್ರಾಲ್  ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದನೆನ್ನಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×