ಕಿನ್ನಗೋಳಿ : ಹಾಡುಹಗಲಲ್ಲೇ ದಂಪತಿಯನ್ನು ನೆರೆಮನೆಯ ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿನ್ನಗೋಳಿ ಏಳಿಂಜೆಯಲ್ಲಿ ಬುಧವಾರ ನಡೆದಿದ್ದು ಆರೋಪಿಯನ್ನು ಬಂಧನ ಮಾಡಲಾಗಿದೆ.
ಮೃತರನ್ನು ವಿನ್ಸೆಂಟ್ ಡಿಸೋಜ (50) ಹಾಗೂ ಅವರು ಪತ್ನಿ ಹೆಲಿನ್ ಡಿಸೋಜ (45) ಎಂದು ಗುರುತಿಸಲಾಗಿದೆ. ವಿನ್ಸೆಂಟ್ ಡಿಸೋಜರವರು ನಿವೃತ್ತ ಸೈನಿಕರು ಎಂದು ತಿಳಿದು ಬಂದಿದೆ.
ಕೊಲೆ ಮಾಡಿದ ಆರೋಪಿ ಅಲ್ಫನ್ಸ್ ಸಲ್ಡಾನ ನೆರೆಮನೆಯ ವ್ಯಕ್ತಿ ಎಂದು ತಿಳಿದು ಬಂದಿದ್ದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ವಿನ್ಸೆಂಟ್ ಡಿಸೋಜರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವರ ಪತ್ನಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಹಳೆಯ ದ್ವೇಷದಿಂದ ಆರೋಪಿ ಅಲ್ಪನ್ಸ್ ಸಲ್ಡಾನ ಪಿಕ್ಕಾಸು ಹಾಗೂ ಹಾರೆಯಿಂದ ದಂಪತಿಗೆ ಹಲ್ಲೆ ಮಾಡಿ ಮನೆಯ ಮುಂಭಾಗದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು, ಕಮೀಷನರ್ ಹರ್ಷ, ಎಸಿಪಿ ಬೆಳ್ಳಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Follow us on Social media