ಹೊಸಪೇಟೆ: ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಯಲ್ಲಿ ಕೊಚ್ಚಿ ಹೋಗುತಿದ್ದ ವೃದ್ದೆಯನ್ನ ಪ್ರಾಣದ ಹಂಗು ತೊರೆದು ಯುವಕನೊಬ್ಬ ರಕ್ಷಿಸಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಆರ್.ಟಿ.ಓ.ಕಛೇರಿಯ ಮುಂದೆ ನಡೆದಿದೆ.
ಎಪ್ಪತ್ತು ವರ್ಷದ ವೃದ್ದೆ ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದರು.
ನೀರಿನಲ್ಲಿ ಬಿದ್ದು ಮುಳುಗಿ ಸುಮಾರು ೩೦೦ ಮೀಟರ್ ದೂರ ಕೊಚ್ಚಿ ಹೋಗಿದ್ದ ವೃದ್ದೆಯನ್ನು ಯುವಕ ರಕ್ಷಿಸಿದ್ದಾನೆ.
ಅಕ್ಕ ಪಕ್ಕದ ಜನಗಳ ಕೂಗಾಟ ಚೀರಾಟ ಕೇಳಿ ಪ್ರಾಣದ ಹಂಗು ತೊರೆದು ನೀರಿಗೆ ಜಿಗಿದ ಅಜೆಯ್ ಎಂಬ ಹದಿನಾರರ ಯುವಕ ಈ ಸಾಹಸ ಕಾರ್ಯ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
Follow us on Social media