ಕಾರ್ಕಳ : ವಿಪರೀತ ಮದ್ಯವ್ಯಸನಿಯಾಗಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಕಾರ್ಕಳ ತಾಲೂಕಿನ ರೆಂಜಾಳ ಪೆರಲ್ದಬೆಟ್ಟು ನಿವಾಸಿ ಮಥಾಯಸ್ ಸಾಂಕ್ತಿಸ್(55)ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಅವಿವಾಹಿತರಾಗಿದ್ದ ಮಥಾಯಸ್ ಕಳೆದ 15 ವರ್ಷಗಳಿಂದ ಮನೆಯಿಂದ ಹೊರಹೋದವರು ಹಲವೆಡೆ ಹೊಟೇಲ್ ಕೆಲಸ ಮಾಡಿಕೊಂಡಿದ್ದರು. ಕೆಲಸದ ವೇಳೆ ವಿಪರೀತ ಮದ್ಯಪಾನ ಚಟ ಹೊಂದಿದ್ದ ಅವರು ಆಗಾಗ ಮನೆಗೆ ಬಂದುಹೋಗುತ್ತಿದ್ದರು.ಶುಕ್ರವಾರ ಮನೆಗೆ ಬಂದಿದ್ದ ಮಥಾಯಸ್ ಅವರು ಶುಕ್ರವಾರ ತಮ್ಮ ತಂದೆಯವರ ಜಾಗದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.