ಜೈಪುರ: ಬಿಜೆಪಿ ಸೇರಲು ಕಾಂಗ್ರೆಸ್ ಶಾಸಕರೊಬ್ಬರಿಗೆ ತಾವು 35 ಕೋಟಿ ರೂ. ನೀಡುವುದಾಗಿ ಹಣದ ಆಮಿಷವೊಡ್ಡಿ ಆರೋಪವನ್ನು ಕಾಂಗ್ರೆಸ್ ಬಂಡಾಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಈ ಆರೋಪದ ಆಧಾರದ ರಹಿತ ಮತ್ತು ದುಃಖಕರ ಎಂದು ಹೇಳಿದ್ದಾರೆ.
ಸಚಿನ್ ಪೈಲಟ್ ಅವರು ಬಿಜೆಪಿ ಸೇರಲು ತಮಗೆ 35 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡಿದ್ದರು ಎಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ಪೈಲಟ್, ಇಂದು ನ್ಯಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಆ ಶಾಸಕರ ವಿರುದ್ಧ “ಸೂಕ್ತ ಮತ್ತು ಕಠಿಣ ಕಾನೂನು ಕ್ರಮ” ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
“ಈ ಆರೋಪದಿಂದಾಗಿ ನಾನು ದುಃಖಿತನಾಗಿದ್ದೇನೆ. ಆದರೆ ನನ್ನ ವಿರುದ್ಧ ಅಂತಹ ಆಧಾರರಹಿತ ಮತ್ತು ಅಸಹ್ಯಕರ ಆರೋಪಗಳನ್ನು ಮಾಡುತ್ತಿರುವುದು ಅಚ್ಚರಿಯಲ್ಲ” ಎಂದು ಪೈಲಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯನಾಗಿ ಮತ್ತು ಶಾಸಕನಾಗಿ ರಾಜ್ಯದ ಪಕ್ಷದ ನಾಯಕತ್ವದ ವಿರುದ್ಧದ ನನ್ನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನದ ಭಾಗವಾಗಿ ಈ ಆರೋಪ ಮಾಡಲಾಗಿದೆ ಸಚಿನ್ ಪೈಲಟ್ ಹೇಳಿದ್ದಾರೆ.
ಸಚಿನ್ ಪೈಲೆಟ್ ಒಮ್ಮೆ ಮನೆಗೆ ಕರೆದಿದ್ದರು. ಅವರ ಮನೆಯಲ್ಲೇ ಸಚಿನ್ ಪೈಲಟ್ ನನಗೆ ಬಿಜೆಪಿ ಸೇರಿದರೆ 30ರಿಂದ 35 ಕೋಟಿ ರೂ. ನೀಡುವ ಆಫರ್ ನೀಡಿದ್ದರು. ಆದರೆ, ನಾನು ಮಾತ್ರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಳಿಸುತ್ತೇನೆ ಹೊರತು ಉರುಳಿಸುವುದಿಲ್ಲ ಎಂದು ವಾರ್ನ್ ಮಾಡಿ ಬಂದೆ ಎಂದು ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಆರೋಪಿಸಿದ್ದಾರೆ.
Follow us on Social media