ಮುಂಬೈ: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ ಟೂರ್ನಮೆಂಟ್ ನಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣ ವರದಿಯಾಗದ ರೀತಿಯಲ್ಲಿ ಗಮನ ಹರಿಸಬೇಕಾಗಿದೆ. ಅತ್ಯುತ್ತಮ ರೀತಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.
ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಕಂಪನಿ ಹಿಂದಕ್ಕೆ ಸರಿಯುತ್ತಿರುವ ಬಗ್ಗೆ ಊಹಾಪೋಹಗಳು ಎದಿದ್ದು, ಇದೊಂದು ಹಾಸ್ಯಾಸ್ಪದ ಅನ್ನಿಸುತ್ತಿದೆ. ಐಪಿಎಲ್ ನಲ್ಲಿ ಭವಿಷ್ಯ ಲೆಕ್ಕಿಸದೆ ಚೀನಾ ಕಂಪನಿ ಒಂದು ವೇಳೆ ದೂರ ಸರಿದರೆ ಬೇರೆ ಕಂಪನಿಗಳ ಪ್ರಾಯೋಜಕತ್ವದ ಅಗತ್ಯವಿರುತ್ತದೆ ಎಂದರು.
ಟೈಟಲ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ನಿರ್ಧಾರದ ಬಗ್ಗೆ ಗೊತ್ತಿಲ್ಲ, ಬಿಸಿಸಿಐನ್ನು ಬೆಂಬಲಿಸಬೇಕಾಗಿದ್ದು, ಶೀಘ್ರದಲ್ಲಿ ಮತ್ತೆ ಸಭೆ ನಡೆಸಲಾಗುವುದು, ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಾಯೋಜಕತ್ವ, ಅಥವಾ ತಂಡ, ಅಥವಾ ಐಪಿಎಲ್ ಬಗ್ಗೆ ಮಾತುಕತೆಯನ್ನು ನಿರೀಕ್ಷಿಸುವುದಾಗಿ ವಾಡಿಯಾ ಹೇಳಿದರು
ಐಪಿಎಲ್ ಟೂರ್ನಮೆಂಟ್ ನ್ನು ಸುಗಮವಾಗಿ ನಡೆಸಲು 16 ಪುಟಗಳ ಮಾರ್ಗಸೂಚಿಗಳನ್ನು ಬಿಸಿಸಿಐ ತಂಡಗಳಿಗೆ ಕಳುಹಿಸಿದೆ. ಐಪಿಎಲ್ ಗಾಗಿ ಯುಎಇಗೆ ಭೇಟಿ ನೀಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಆದರೆ, ಸುರಕ್ಷತೆ ಬಗ್ಗೆ ರಾಜೀ ಇಲ್ಲ, ಒಂದೇ ಒಂದು ಕೋವಿಡ್-19 ಪ್ರಕರಣ ಕಂಡುಬಂದರೂ ಐಪಿಎಲ್ ರದ್ದಾಗುವ ಸಾಧ್ಯತೆಯಿದೆ.ಇಂತಹ ಘಟನೆಗಳು ನಡೆಯದಂತೆ ಗಮನಹರಿಸಬೇಕಾಗಿದೆ ಎಂದು ನೆಸ್ ವಾಡಿಯಾ ತಿಳಿಸಿದರು.
Follow us on Social media