ದುಬೈ: ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 2020 ಪಂದ್ಯದ 47 ನೇ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಮತ್ತು ಡೇವಿಡ್ ವಾರ್ನರ್ ಅಮೋಘ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ 88 ರನ್ ಭರ್ಜರಿ ಗೆಲುವು ಸಾಧಿಸಿದೆ.
ಸಹಾ 87 ವಾರ್ನರ್‌ನ 66 ರನ್ ಗಳು ಹೈದರಾಬಾದ್ ತಂಡವನ್ನು 20 ಓವರ್‌ಗಳಲ್ಲಿ 219/2 ಕ್ಕೆ ತಲುಪಿಸಿದರೆ ಡೆಲ್ಲಿ 131 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ರಹಾನೆ 26, ಮರ್ಕಸ್ ಸ್ಟೋನಿ 5, ಹಿಟ್ಮೇಯರ್ 16, ಪಂತ್ 36, ಅಯ್ಯರ್ 7, ಅಕ್ಸರ್ ಪಾಟೀಲ್ 1, ರಬಡಾ 3, ಅಶ್ವಿನ್ 7, ತುಷಾರ್ ದೇಶಪಾಂಡೆ 20, ಅರ್ನಿಚ್ 1 ರನ್ ಗಳಿಸಿದ್ದರು.
ಹೈದರಾಬಾದ್ ಪರ ಸಂದೀಪ್ ಶರ್ಮಾ, ನಟರಾಜನ್ ತಲಾ 2 ವಿಕೆಟ್, ರಶೀದ್ ಖಾನ್ 3 ವಿಕೆಟ್ ಗಳಿಸಿದ್ದಾರೆ.
ಡೆಲ್ಲಿ ಪಾಲಿಗಿದು ಸತತ ಮೂರನೇ ಸೋಲಾಗಿದ್ದು ಈ ಹಿಂದೆ ಕೆಕೆಆರ್ ಮತ್ತು ಪಂಜಾಬ್ ವಿರುದ್ಧ ಸೋಲು ಅನುಭವಿಸಿತ್ತು.
12 ಪಂದ್ಯಗಳಿಂದ ಡೆಲ್ಲಿಗೆ ಇದು ಐದನೇ ಸೋಲಿನ ಪಂದ್ಯವಾಗಿದೆ., ಮತ್ತು ಉಳಿದಿರುವ ಎರಡು ಪಂದ್ಯಗಳಿಂದ ಪ್ಲೇ-ಆಫ್ ಸ್ಥಾನ ಗಟ್ಟಿ ಮಾಡಿಕೊಳ್ಳಲು ಒಂದು ಪಂದ್ಯವನ್ನು ಗೆಲ್ಲಲೇಬೇಕಿದೆ. ಆದರೆ 12 ಪಂದ್ಯಗಳಿಂದ ಎಸ್‌ಆರ್‌ಹೆಚ್ ಐದು ಗೆಲುವು ಸಾಧಿಸಿದ್ದು ಪ್ಲೇ ಆಫ್ ತಲುಪಲು ಆ ತಂಡ ಸಹ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ.
Follow us on Social media