ನವದೆಹಲಿ: ಸರ್ಕಾರದ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಕೊರೋನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನ್ನು ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಮಾ.25-ಏ.14 ವರೆಗೆ 3 ವಾರಗಳ ಲಾಕ್ ಡೌನ್ ನ್ನು ಘೋಷಿಸಿದ್ದರು. ಈ ಲಾಕ್ ಡೌನ್ ನ್ನು ಇನ್ನೂ 2 ವಾರಗಳ ಕಾಲ, ಅಂದರೆ ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ.
ಏ.30 ರ ನಂತರ, ಮೇ.1 ರಿಂದ ಲಾಕ್ ಡೌನ್ ಮುಕ್ತಾಯಗೊಂಡರೂ ಸಹ ಸಾರ್ವಜನಿಕ ಜೀವನ ಹಿಂದಿನ ಸ್ಥಿತಿಗೆ ಮರಳುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.
ಸರ್ಕಾರ ಯೋಜನೆ ಮಾಡಿರುವ ಪ್ರಕಾರ ಮೊದಲು ಮಾ.05 ರಂದು ಧಾರ್ಮಿಕ ಪ್ರದೇಶಗಳು ಪುನಾರಂಭಗೊಳ್ಳಲಿದೆ, ಮಾ.07 ರಂದು ಹಣ್ಣು ಮತ್ತು ತರಕಾರಿ ಮಾರ್ಕೆಟ್ ಗಳು ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಣೆ ಮಾಡಲಿವೆ.
ಮೇ.15 ರಿಂದ ರೈಲು, ದೇಶಿ ವಿಮಾನಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮೇ ತಿಂಗಳ ಮೂರನೇ ವಾರದಲ್ಲಿ ಸಿನಿಮಾ ಹಾಲ್, ಮಾಲ್ ಗಳು ತೆರೆಯಲಿವೆ. ಮೇ ಅಂತ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳನ್ನು ಜುಲೈ.30 ರಿಂದ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಇವೆಲ್ಲವನ್ನೂ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಲಾಕ್ ಡೌನ್ ಗೆ ಸಂಬಂಧಿಸಿದಂತೆ ಏ.12 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
Follow us on Social media