ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಉಪಾಹಾರಕ್ಕೆ ಎಂಟಿಆರ್ ಹೋಟೆಲ್ ಗೆ ಭೇಟಿ ನೀಡಿದರು.
ಕಂದಾಯ ಸಚಿವ ಆರ್. ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ತೆರಳಿದ ಯಡಿಯೂರಪ್ಪ ಅವರು ಮಸಾಲ ದೋಸೆ ತಿಂದು ಚಾ ಕುಡಿದರು.
ತೇಜಸ್ವಿ ಸೂರ್ಯ ಅವರು ಈ ಫೋಟೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಎಂಟಿಆರ್ ನಲ್ಲಿ ಉಪಾಹಾರ ಸೇವಿಸುವ ಮೂಲಕ ತನ್ನ ವಾರಾಂತ್ಯವನ್ನು ಆರಂಭಿಸಿ ಭಾರತದ ಮೊದಲ ಮುಖ್ಯಮಂತ್ರಿ ಎಂದು ಅವರು ಟ್ವೀಟ್ ಮಾಡಿರುವರು.
ಕೊವಿಡ್-19ನಿಂದಾಗಿ ಮುಚ್ಚಲ್ಪಟ್ಟಿದ್ದ ಹೋಟೆಲ್ ಗಳು ತೆರೆದರೂ ಜನರು ಹಿಂದಿನಂತೆ ಬರದೇ ಇರುವ ಕಾರಣದಿಂದಾಗಿ ಹೋಟೆಲ್ ಉದ್ಯಮದಲ್ಲಿ ಭರವಸೆ ಮೂಡಿಸಲು ಸಿಎಂ ಉಪಾಹಾರ ಮಾಡಿರುವರು ಎಂದು ಹೇಳಲಾಗಿದೆ.
Follow us on Social media