ಉಡುಪಿ : ಮಧ್ಯ ರಾತ್ರಿ ಪರವಾನಗಿ ಇಲ್ಲದೆ ಡಿ.ಜೆ. ಸೌಂಡ್ ಹಾಕಿ ನೃತ್ಯ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿದ ನಗರ ಪೊಲೀಸರು ಸೌಂಡ್ ಬಾಕ್ಸ್, ಮಿಕ್ಸರ್ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪುತ್ತೂರು ಗ್ರಾಮದ ಕೊಡಂಕೂರಿನ ರವಿರಾಜ್ ಎಂಬುವವರ ಮನೆಯಲ್ಲಿ ಮಾ.23 ರ ಬೆಳಗಿನ ಜಾವ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಇಲ್ಲದೆ ಡಿ.ಜೆ ಸೌಂಡ್ಸ್ ಹಾಕಿಕೊಂಡು ನಲಿಯುತ್ತಿದ್ದರು.
ಈ ವೇಳೆ ದಾಳಿ ನಡೆಸಿದ ಪೊಲೀಸರು ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow us on Social media