Breaking News

ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಕೊಹ್ಲಿ ಬಳಗಕ್ಕೆ ಖಾತ್ರಿಯಾಗದ ಪ್ಲೇ ಆಫ್ ಹಂತ

ಶಾರ್ಜಾ: ಬ್ಯಾಟಿಂಗ್ ವಿಭಾಗದಲ್ಲಿ ದಯನೀಯ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲಿಗೆ ಶರಣಾಯಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್-13ರ ತನ್ನ 13ನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 5 ವಿಕೆಟ್‌ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ ಬಳಗದ ಪ್ಲೇಆಫ್ ಹಂತದ ಖಾತ್ರಿ ಕಡೇ ಲೀಗ್ ಪಂದ್ಯಕ್ಕೆ ಮುಂದೂಡಿಕೆಯಾದರೆ, ಸನ್‌ರೈಸರ್ಸ್‌ ಲೀಗ್‌ನಲ್ಲಿ ತನ್ನ ಹೋರಾಟ ಉಳಿಸಿಕೊಂಡಿತು. ಸೋಲಿನ ನಡುವೆಯೂ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್‌ಗೆ 120 ರನ್ ಪೇರಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ 14.1 ಓವರ್‌ಗಳಲ್ಲಿ 5 ವಿಕೆಟ್‌ಗೆ 121 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (8) ಆರಂಭದಲ್ಲೇ ವಿಫಲರಾದರು. ವೃದ್ಧಿಮಾನ್ ಸಾಹ (39) ಹಾಗೂ ಮನೀಷ್ ಪಾಂಡೆ (26) ಜೋಡಿ 2ನೇ ವಿಕೆಟ್‌ಗೆ 50ರನ್ ಗಳಿಸಿ ತಂಡದ ಗೆಲುವನ್ನು ಸುಲಭವಾಗಿಸಿತು. ಈ ಜೋಡಿ ನಿರ್ಗಮನದ ಬಳಿಕ ಕೇನ್ ವಿಲಿಯಮ್ಸನ್ (8) ಹಾಗೂ ಅಭಿಷೇಕ್ (8) ನಿರಾಸೆ ಅನುಭವಿಸಿದರೆ, ಜೇಸನ್ ಹೋಲ್ಡರ್ (26*ರನ್, 10 ಎಸೆತ, 1 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು 35 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×