ಧಾರವಾಡ: ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ತೆರಳಿದ್ದ ಬಾಲಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಸೈದಾಪುರದ ಸುಮಿತ್ ಪಾಂಡೆ (10) ಅಪಘಾತದಲ್ಲಿ ಮೃತಪಟ್ಟ ಬಾಲಕ.
ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್ ವಾಹನದಲ್ಲಿ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮನಪುರಂ ಜಿಲ್ಲೆಯ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿದೆ.
ಇದರಿಂದಾಗಿ ಸುಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ.
ಸೂರಜ್ ಪಾಂಡೆ, ನಿಖಿಲ್ ಪಾಂಡೆ ಹಾಗೂ ಸುಶಾಂತ್ ಪಾಂಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ಸುಮಿತ್ ಪಾಂಡೆ ಪಾರ್ಥಿವ ಶರೀರವನ್ನು ಧಾರವಾಡಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ.
Follow us on Social media