Breaking News

ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ಲೋಕದ ಪ್ರತಿಭೆ ಹಾಗೂ ಪ್ರಮುಖ ಆಟಗಾರ್ತಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಎಲ್ಲ ಪ್ರಯಾಣಗಳಂತೆ ಇದೂ ಕೂಡ ಕೊನೆಗೊಳ್ಳಬೇಕು ಎಂದು ಬರೆದುಕೊಂಡಿರುವ ಮಿಥಾಲಿ ರಾಜ್ ಅವರು 1999 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾವನಾತ್ಮಕ ಟಿಪ್ಪಣಿಯಲ್ಲಿ, ಮಿಥಾಲಿ ರಾಜ್ ಅವರು ಈವರೆಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಜೀವನದ 2ನೇ ಇನ್ನಿಂಗ್ಸ್​ಗೂ ಆಶೀರ್ವಾದ ಮಾಡುವಂತೆ ಕೋರಿದ್ದಾರೆ.

ಮಿಥಾಲಿ ರಾಜ್ ಅವರು ಜೂನ್ 1999 ರಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಮಿಥಾಲಿ ರಾಜ್ ಭಾರತ ಮಹಿಳಾ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಇನ್ನು 89 ಟಿ20 ಪಂದ್ಯಗಳಿಂದ ಮಿಥಾಲಿ ರಾಜ್ 2,364 ರನ್ ಸಿಡಿಸಿದ್ದರು.

ಇದಷ್ಟೇ ಅಲ್ಲದೇ ಭಾರತ ಪರ 12 ಟೆಸ್ಟ್ ಪಂದ್ಯಗಳನ್ನಾಡಿ 699 ರನ್ ಬಾರಿಸಿದ್ದರು. ಎರಡು ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಥಾಲಿ 7 ಏಕದಿನ ಹಾಗೂ ಒಂದು ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×