ಬಂಟ್ವಾಳ: ಬಾವಿ ಸ್ವಚ್ಛಗೊಳಿಸುವ ವೇಳೆ ಅಸ್ವಸ್ಥಗೊಂಡ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಬಂಟ್ವಾಳದ ಗಾಣದಪಡ್ಪು ಎಂಬಲ್ಲಿ ನಡೆದಿದೆ.
ಇಲ್ಲಿನ ಬಿ.ವಾಸು ಪೂಜಾರಿ ಎಂಬವರು ಮನೆಯ ಬಾವಿಯನ್ನು ಸ್ವಚ್ಚಗೊಳಿಸಲು ಬಾವಿಗೆ ಇಳಿದ್ದಿದ್ದು, ಸ್ವಚ್ಚತಾ ಕಾರ್ಯ ಮಾಡುವ ವೇಳೆ ನಿತ್ರಾಣಗೊಂಡು ಬಾವಿಯಿಂದ ಮೇಲೆ ಬರಲಾಗದೆ ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಬಂಟ್ವಾಳ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ನಂದಪ್ಪ ನಾಯ್ಕೋಡಿಯವರು ಬಾವಿಗೆ ಇಳಿದು ಬಿ.ವಾಸು ಪೂಜಾರಿಯವರನ್ನು ಯಾವುದೇ ಪ್ರಾಣಾಪಾಯ ಇಲ್ಲದೆ ಜೀವಂತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.ಬಂಟ್ವಾಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಯು.ರವೀಂದ್ರ, ಸಿಬ್ಬಂದಿ ಪುರುಷೋತ್ತಮ, ರೋಹಿತ್, ರುಕ್ಕಯ್ಯ ಅಮೀನ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಮತ್ತಿತ್ತರರು ಕಾರ್ಯಚರಣೆಯಲ್ಲಿದ್ದರು.
Follow us on Social media