ತಿರುವನಂತಪುರಂ : ಆರ್ಥಿಕ ಸಂಕಷ್ಟದಲ್ಲಿದ್ದ ಹಾಗೂ ವಿದೇಶಕ್ಕೆ ತೆರಳಲು ಸಾಲ ಮಾಡಿದ್ದ ಆಟೋ ಚಾಲಕನಿಗೆ ಓಣಂ ಲಾಟರಿ ಡ್ರಾದಲ್ಲಿ ಬರೊಬ್ಬರಿ 25 ಕೋಟಿ ರೂ. ಒಲಿದಿದೆ.
- ಅನುಪ್ ಎಂಬ ಯುವಕ ಮಲ್ಯಾಷ್ಯಕ್ಕೆ ಹೋಗಲು ಸಾಲ ಮಾಡಿದ್ದು, ಇದೇ ವೇಳೆಗೆ 25 ಕೋಟಿ ಲಾಟರಿ ಹಣ ಬಂದಿದೆ.ಇನ್ನು ಈ ಬಾರಿ ಓಣಂ ಲಾಟರಿ ಬಹುಮಾನದ ಹಣವನ್ನ ಹೆಚ್ಚಿಸಲಾಗಿದ್ದು, ಮೊದಲು 12 ಕೋಟಿ ಇದ್ದ ಬಹುಮಾನದ ಹಣವನ್ನ 25 ಕೋಟಿಗೆ ಹೆಚ್ಚಿಸಲಾಗಿತ್ತು.25 ಕೋಟಿ ಬಹುಮಾನದ ಹಣ ಪಡೆದಿರುವ ಅನೂಪ್ ಮನೆ ಕಟ್ಟಿಸುವುದು ಹಾಗೂ ಸಾಲ ತೀರಿಸಿ ಜೀವನವನ್ನ ಕಟ್ಟಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.