ನವದೆಹಲಿ : ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ 2017 ರಿಂದ ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೇಳಿದ್ದಾರೆ.
ಯೆಸ್ ಬ್ಯಾಂಕ್ ನಿಂದ ಏಪ್ರಿಲ್ 3 ರವರೆಗೆ 50,000 ರೂ.ಗೆ ಮಾತ್ರ ವಾಪಸ್ ಪಡೆವುದಕ್ಕೆ ನಿರ್ಬಂಧ ಹೇರುವ ಸರ್ಕಾರದ ನಿರ್ಧಾರದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಯೆಸ್ ಬ್ಯಾಂಕ್ನ ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಸಮಯದಲ್ಲಿ, ಆಡಳಿತಾತ್ಮಕ ಸಮಸ್ಯೆಗಳು ಮತ್ತು ಬ್ಯಾಂಕಿನಲ್ಲಿ ದುರ್ಬಲ ಅನುಸರಣೆ ಇರುವುದನ್ನು ರಿಸರ್ವ್ ಬ್ಯಾಂಕ್ ಗಮನಿಸಿದೆ. ಬ್ಯಾಂಕ್ ನಲ್ಲಿ ಸಾಲ ನೀಡಿಕೆಯಲ್ಲಿ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
‘ಯೆಸ್ ಬ್ಯಾಂಕ್ಗೆ ಈಕ್ವಿಟಿ ಪಡೆಯುವ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿಲ್ಲ. ತನಿಖಾ ಸಂಸ್ಥೆಗಳು ಸಹ ಯೆಸ್ ಬ್ಯಾಂಕ್ನಲ್ಲಿ ಅಕ್ರಮಗಳನ್ನು ಪತ್ತೆ ಮಾಡಿವೆ.’ ಎಂದು ಅವರು ಹೇಳಿದರು.
Source : UNI
Follow us on Social media