ಚಾಮರಾಜನಗರ: ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 81 ವರ್ಷದ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ ಎಂದಿದ್ದಾರೆ.
ಮುಂದಿನ ವಿಧಾನಸಭಾ ಅವಧಿ ಪೂರ್ಣಗೊಂಡಾಗ ನನಗೆ 81 ವರ್ಷ ಆಗುತ್ತದೆ. ಹಾಗಾಗಿ, ಇದು ನನ್ನ ಕೊನೆಯ ಚುನಾವಣೆ. ನನ್ನ ಮಗ ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸಿ ಶಾಸಕನೂ ಆಗಿದ್ದಾನೆ. ರಾಜಕೀಯ ಎಂದರೆ ಅಧಿಕಾರ ಪಡೆದು ಹಣ ಮಾಡುವುದಲ್ಲ, ಮಜಾ ಮಾಡುವುದಲ್ಲ, ನಾಡಿನ ಜನರ ಸೇವೆಯನ್ನು ಮಾಡುವುದು ಎಂದರು.
40 ವರ್ಷಗಳಿಂದ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನನ್ನ ಐದು ವರ್ಷ ಆಡಳಿತದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಸಹಾಯ ಮಾಡಿದ್ದೇನೆ. ಹಿಂದೆ ನಾನು ಬಸ್ತೀಪುರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಈಗ ಸಿದ್ದಪ್ಪಾಜಿ ಕೊಂಡೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದೇನೆ. ದಲಿತರು, ನಾಯಕರು ಹಾಗೂ ಕುರುಬ ಜನಾಂಗದವರು ಒಟ್ಟಾಗಿ ಸೇರಿ ಈ ಹಬ್ಬ ಮಾಡುತ್ತಿರುವುದರಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
Follow us on Social media