ಸೌತಂಪ್ಟಾನ್ (ಬ್ರಿಟನ್): ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡ್ ಪ್ರದರ್ಶನದಿಂದ ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 50 ರನ್‍ಗಳ ಭರ್ಜರಿ ವಿಜಯ ಸಾಧಿಸಿದೆ.
ಚೊಚ್ಚಲ ಟಿ-20 ಅಂತರರಾಷ್ಟ್ರೀಯ ಅರ್ಧಶತಕ ಬಾರಿಸಿದ ಪಾಂಡ್ಯ, ಬೌಲಿಂಗ್‍ನಲ್ಲೂ ಮಿಂಚಿ ನಾಲ್ಕು ವಿಕೆಟ್ ಕಿತ್ತುಕೊಂಡರು.
30 ಎಸೆತಗಳಲ್ಲಿ 50 ರನ್ ಸಿಡಿಸಿದ ಪಾಂಡ್ಯ ಭಾರತದ ಭರ್ಜರಿ ಮೊತ್ತ (198-8)ಕ್ಕೆ ಕಾರಣರಾದರು. 51 ರನ್‍ಗಳಿಗೆ ಔಟ್ ಆಗುವ ಮುನ್ನ ಪಾಂಡ್ಯ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದರು. ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ (39) ಹಾಗೂ ದೀಪಕ್ ಹೂಡಾ (33) ಅವರು ಉತ್ತಮ ಅಡಿಪಾಯ ಒದಗಿಸಿದ್ದರು.
ಬೌಲಿಂಗ್‍ನಲ್ಲೂ ಮಿಂಚಿದ ಪಾಂಡ್ಯ, 33 ರನ್‍ಗಳಿಗೆ ನಾಲ್ಕು ವಿಕೆಟ್ ಕಿತ್ತರು. ಅತಿಥೇಯ ತಂಡ ಕೇವಲ 148 ರನ್ ಗಳಿಸಲು ಸಾಧ್ಯವಾಯಿತು.
Follow us on Social media