ಮುಂಬೈ : ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಟಿ-20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೆ ಅರ್ಹತೆ ಪಡೆದ ಹರ್ಮನ್ ಪ್ರೀತ್ ಬಳಗವನ್ನು ಅಭಿನಂದಿಸಿದ್ದು, ಸ್ಥಿರ ಆಟವಾಡುವಂತೆ ಕಿವಿ ಮಾತು ನೀಡಿದ್ದಾರೆ.
ಭಾರತ ಮಹಿಳಾ ತಂಡ ಮಾ.8 ರಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಭಾರತ, ಇಂಗ್ಲೆಂಡ್ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ, ಭಾರತ ಲೀಗ್ ಹಂತದಲ್ಲಿನ ಅಂಕಗಳ ಆಧಾರಾದ ಮೇಲೆ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಆಸೀಸ್ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು.
“ನಿಮ್ಮ ನೈಜ ಆಟವಾಡಿ ಹಾಗೂ ಆಟವನ್ನು ಆನಂದಿಸಿರಿ. ವನಿತೆಯರು ನೀಡಿದ ಪ್ರದರ್ಶನ ಉತ್ತಮ. ಪ್ರಶಸ್ತಿ ಭಾರತಕ್ಕೆ ಬಂದರೆ ಖುಷಿ ಪಡುತ್ತೇವೆ” ಎಂದು ತಿಳಿಸಿದ್ದಾರೆ.
“ಫೈನಲ್ ಪಂದ್ಯದಲ್ಲಿ ನಿಮ್ಮ ಉತ್ತಮ ಆಟದ ಪ್ರದರ್ಶನ ನೀಡಿ. ಒತ್ತಡವನ್ನು ತೆಗೆದುಕೊಳ್ಳದೇ ಪಂದ್ಯವನ್ನು ಆಡಿರಿ. ಎಲ್ಲರೂ ಒಟ್ಟಾಗಿ ಆಡಿ, ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಗುಣತ್ಮಾಕ ಅಂಶಗಳ ಮೇಲೆ ಗಮನ ಹರಿಸಿ. ಇಲ್ಲಿನ ಅದೆಷ್ಟೋ ಯುವತಿಯರಿಗೆ ನಿಮ್ಮ ಆಟ ಮಾದರಿ” ಎಂದು ಸಚಿನ್ ತಿಳಿಸಿದ್ದಾರೆ.
Source : UNI