ಪುತ್ತೂರು: ಪುತ್ತೂರಿನ ಮುಂಡೂರು ಗ್ರಾಮದ ಪಂಜಳದಲ್ಲಿ ಸ್ವಿಫ್ಟ್ ಮತ್ತು ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಹಲವು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.ಗಾಯಗೊಂಡ ಓಮ್ನಿ ಮತ್ತು ಕಾರಿನಲ್ಲಿದ್ದವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಚಾರಿ ಠಾಣೆಯ ಯಸ್. ಐ. ರಾಮ ನಾಯ್ಕ್ ಹಾಗು ಸಿಬ್ಬಂದಿಗಳು ತನಿಖೆ ನಡೆಸಿ ಪುತ್ತೂರಿನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.