ಬಂಟ್ವಾಳ : ಕೈಗಾರಿಕಾ ತರಬೇತಿ ಸಂಸ್ಥೆಗಳು ದೇಶಕ್ಕೆ ಶಕ್ತಿಯನ್ನು ತುಂಬುವ ಕಾರ್ಯ ನಡೆಸುತ್ತಿದೆ. ಇಂಡಸ್ಟ್ರೀ 4.0 ಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಕಲಿಕೆಯಲ್ಲೂ ಸುಧಾರಣೆಗಳನ್ನು ತರುವ ಕಾರ್ಯವನ್ನು ಸರ್ಕಾರ ಮಾಡಿದೆ. ವಿಟ್ಲ ಐಟಿಐಯಲ್ಲಿ ಉದ್ಯೋಗ ಯೋಜನೆಯಡಿ 1ಕೋಟಿಯ ಕಟ್ಟಡ, 31ಕೋಟಿ ವೆಚ್ಚದ ತಂತ್ರಜ್ಞಾನಗಳನ್ನು ಪ್ರಯೋಗಾಲಯದಲ್ಲಿ ಅಳವಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.
- ಅವರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಟ್ಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಮೂರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿದರು. ಬಜೆಟ್ ನಲ್ಲಿ 30ಸಂಸ್ಥೆಗಳ ಉನ್ನತೀಕರಣಕ್ಕೆ ಅವಕಾಶ ಮಾಡಲಾಗಿದೆ. 1200 ಸಂಸ್ಥೆಯ ಮೂಲಕ 1.5ಲಕ್ಷ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾವಿದೆ. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡುವ ಜತೆಗೆ ದೊಡ್ಡ ಸುಧಾರಣೆಯನ್ನು ಮಾಡಲಾಗುತ್ತಿದೆ. 23 ನೂತನ ವಿಷಯಗಳ ತರಬೇತಿಯನ್ನು ಆರಂಭಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಖಾಸಗೀ ಇಂಜಿನಿಯರಿಂಗ್ ಕಾಲೇಜಿನಷ್ಟು ಸುಸಜ್ಜಿತವಾಗಿ ವ್ಯವಸ್ಥೆ ವಿಟ್ಲ ಐಟಿಐಗೆ ಲಭಿಸಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ನಾವು ಕಾಣಬಹುದಾಗಿದೆ. ದೇಶವಿದೇಶಗಳಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಮೇಳ ನಡೆಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ನೂತನ ಕಟ್ಟಡಕ್ಕೆ 4 ಕೋಟಿ ಅನುದಾನ ನೀಡಿದ್ದು, ಕಟ್ಟಡದ ಸಮೀಪ ತಡೆಗೋಡೆ ನಿರ್ಮಾಣಕ್ಕೆ 1ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಕಾಲಿಕವಾಗಿ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.