ಯಾದಗಿರಿ: ಬುದ್ಧಿ ಹೇಳಲು ಬಂದಿದ್ದ ಪತ್ನಿಯ ಸಂಬಂಧಿಕರ ಮೇಲೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಕೃತ್ಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಶರಣಪ್ಪ ಮತ್ತು ಪತ್ನಿ ಹುಲಿಗಮ್ಮ ನಡುವೆ ದಾಂಪತ್ಯ ಕಹಲ ನಡೆಯುತ್ತಿತ್ತು. ಹೀಗಾಗಿ ಹುಲಿಗಮ್ಮ ತಂದೆ ಹಾಗೂ ಮೂವರು ಸಂಬಂಧಿಕರು ಶರಣಪ್ಪನಿಗೆ ಬುದ್ಧಿವಾದ ಹೇಳಲು ಬಂದಿದ್ದರು. ಇದರಿಂದ ಕೆರಳಿದ ಶರಣಪ್ಪ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಪರಿಣಾಮ ನಾಗಪ್ಪ ಸಜೀವ ದಹನವಾಗಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶರಣಪ್ಪ ಲಿಂಗಸೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು ಕೊಲೆ ಸಂಬಂಧ ನಾರಾಯಣಪುರ ಪೊಲೀಸ್ ಶರಣಪ್ಪನನ್ನು ಬಂಧಿಸಿದ್ದಾರೆ.
Follow us on Social media