ಬಂಟ್ವಾಳ : ತೊಳೆದು ಇಟ್ಟಿದ್ದ ಪಾತ್ರೆ ಹಾಗೂ ಸ್ನಾನ ಮಾಡುವ ಹಂಡೆ ಕದ್ದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದಾನೆ.ಅಗರಗಂಡಿ ನಿವಾಸಿ ಪ್ರವೀಣ ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ಈತನ ಸಹೋದರ ಸತೀಶ್ ಪರಾರಿಯಾಗಿದ್ದಾನೆ.
ದೂರಿನ ವಿವರ
ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿ ಮಹಿಳೆಯ ಮನೆಯೊಂದರಲ್ಲಿ ಅಡುಗೆ ಮಾಡುವ 2 ಪಾತ್ರೆಗಳನ್ನು ತೊಳೆದು ಒಣಗಲು ಇಟ್ಟಿದ್ದರು.
ಸಂಜೆ ವೇಳೆಗೆ ಸ್ನಾನ ಮಾಡುವ ಅಲ್ಯುಮಿನಿಯಮ್ ಹಂಡೆ ಹಾಗೂ ಒಣಗಲು ಇಟ್ಟಿದ್ದ ಪಾತ್ರೆ ಜೊತೆಗೆ 2 ಪೈಬರ್ ಚೇರ್ ಕಳವು ಮಾಡಲಾಗಿದೆ.
ಕಳುವಾದ ಸ್ವತ್ತುಗಳ ಅಂದಾಜು ಮೌಲ್ಯ 3500 ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಗ್ರಾಮಾಂತರ ಎಸ್. ಐ.ಹರೀಶ್, ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಐ ಸಂಜೀವ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Follow us on Social media