Breaking News

ಕಡಬ : ತೆಂಗಿನಕಾಯಿ ಕೀಳಲು ಹೋಗಿ ಹಾರಿ ಹೋಯ್ತು ಜೀವ

ಕಡಬ: ತೆಂಗಿನಕಾಯಿ ಕೀಳುವಾಗ ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸಂಭವಿಸಿದೆ.

ಇಲ್ಲಿನ ಕೊಡಿಂಬಾಳ ಕೊಡೆಂಕೇರಿ ನಿವಾಸಿ ತೋಮಸ್ (63) ಮೃತ ದುರ್ದೈವಿ.

ತನ್ನ ತೋಟದದಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಮೆಸ್ಕಾಂ ಎಇಇ ಸತ್ಯನಾರಾಯಣ, ಮೆಸ್ಕಾಂ ಎಇಟಿ ಸಜಿಕುಮಾರ್ ಪೊಲೀಸ್ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×