ಮಂಗಳೂರು: ದೇಶದಲ್ಲಿ ಎನ್‌ಡಿಎ ಸರಕಾರ ಬಂದ ಮೇಲೆ ಪರಿವರ್ತನೆಯ ಹಾದಿ ಆರಂಭವಾಗಿದೆ. ನರೇಂದ್ರ ಮೋದಿಯವರು ತಂದ ಎಲ್ಲಾ ಯೋಜನೆ ಕಾಂಗ್ರೆಸ್ ವಿರೋಧಿಸುತ್ತಿದೆ. ದೇಶಕ್ಕೆ ಒಳ್ಳೆದಾಗುವುದನ್ನ ವಿರೋಧಿಸೋದು ಕಾಂಗ್ರೆಸ್ ಮಾನಸಿಕತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಅಗ್ನಿಪಥ್ ಎನ್ನುವುದು ಸೈನ್ಯಕ್ಕೆ ಯುವಶಕ್ತಿ ಬರಬೇಕು ಎಂಬ ಯೋಜನೆ. ಎಲ್ಲರಿಗೂ ಮಿಲಿಟರಿ ಸಂಸ್ಕಾರ, ಶಿಕ್ಷಣ ಸಿಗಬೇಕು. ರಾಷ್ಟ್ರಭಕ್ತಿ ಜಾಗೃತವಾಗಬೇಕು. ಆಗ ಅವರ ಜೀವನದಲ್ಲಿ ಒಳ್ಳೆಯದಾಗುತ್ತದೆ. ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ. ಇದನ್ನು ಕಾಂಗ್ರೆಸ್‌ನವರಲ್ಲಿ ಕೇಳಿಲ್ಲ. ಉದ್ಯೋಗ ಬಯಸುವವರಿಗೆ, ಸೇನೆ ಸೇರಲು ಬಯಸುವವರಿಗೆ, ರಾಷ್ಟ್ರಕ್ಕಾಗಿ ದುಡಿಯುವವರಿಗೆ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಅಗ್ನಿಪಥ ಯುವಜನತೆಯ ಭವಿಷ್ಯಕ್ಕಾಗಿ. ಮುಂದೆಯೂ ಅವರಿಗೆ ಉದ್ಯೋಗ ದೊರೆಯುವ ಅವಕಾಶವಿದೆ. ಕಾಂಗ್ರೆಸ್‌ನದ್ದು ವಿರೋಧದ ಮಾನಸಿಕತೆ ಎಂದರು.
ಕಾಂಗ್ರೆಸ್ ದ್ವೇಷದ ಭಾವನೆ ಹೊಂದಿದ್ದು, ಗಲಭೆಗೆ ಪ್ರಚೋದನೆ ಕೊಡ್ತಿದೆ. ರಾಜ್ಯದಲ್ಲಿ ಸರಕಾರ ಇರುವಾಗಲೂ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿದೆ. ಘಟನೆಗಳಲ್ಲಿ ಸೂತ್ರಧಾರಿಯಾಗಿ ಇರುವುದನ್ನು ಕಂಡಿದ್ದೇವೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಹುಬ್ಬಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಹರಡುತ್ತದೆ. ಪಠ್ಯ ಪುಸ್ತಕದಲ್ಲಿ ಏನಿದೆ ಎಂದು ಓದದೆ ಮೂರ್ಖತನದ ಪರಮಾವಧಿ ತೋರಿಸುತ್ತಿದೆ ಎಂದು ವಾಗ್ದಾಲಿ ನಡೆಸಿದರು. ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ಆಡಳಿತ ನಡೆಸುವುದು ಹೇಗೆಂದು ಗೊತ್ತಿದೆ. ಸಾಹಿತಿಗಳು ಕೂಡ ಯೋಚನೆ ಮಾಡಲಿ. ಯಾವ ಕಾಲಘಟ್ಟದಲ್ಲಿ ಯಾವ ಹೋರಾಟ ಮಾಡಿದ್ದಾರೆಂದು. ಯಾರೇ ಆದರೂ ಕೂಡ ಪುಸ್ತಕದಲ್ಲಿರುವ ವಿಷಯಗಳನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.
Follow us on Social media