ವಿಟ್ಲ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಮಾಲೀಕರ ನ್ಯಾಯಬೆಲೆ ಅಂಗಡಿಯನ್ನು ಪ್ರಾಧಿಕಾರದಿಂದ ಅಮಾನತು ಮಾಡಲಾದ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲದ ಬೋಳಂತೂರು ಸಮೀಪದಲ್ಲಿ ನಡೆದಿದೆ.
ಬೋಳಂತೂರು ಗ್ರಾಮದ ಅಬೂಬಕರ್ ಮತ್ತು ಹಮೀದ್ ನಾರ್ಶ್ ಅವರ ಅಂಗಡಿಗಳು ಅಮಾನತು ಆದ ನ್ಯಾಯಬೆಲೆ ಅಂಗಡಿಗಳು.
ಲಾರಿಯಲ್ಲಿ ಸುಮಾರು 15 ಟನ್ ಅಕ್ಕಿಯನ್ನು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಲಾರಿ ಚಾಲಕನನ್ನು ವಿಚಾರಿಸಿದಾಗ ಆರೋಪಿ ನ್ಯಾಯ ಬೆಲೆ ಅಂಗಡಿಯವರ ಬಗ್ಗೆ ಮಾಹಿತಿ ನೀಡಿದ್ದ.
ಈ ಹಿನ್ನೆಲೆ ನ್ಯಾಯಬೆಲೆ ಅಂಗಡಿ ಮಾಲೀಕರಾದ ಹಮೀದ್ ಮತ್ತು ಅಬೂಬಕ್ಕರ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣದ ಆಧಾರದಲ್ಲಿ ಇವರ ನ್ಯಾಯಬೆಲೆ ಅಂಗಡಿಯನ್ನು ಪ್ರಾಧಿಕಾರದಿಂದ ಅಮಾನತು ಮಾಡಲಾಗಿದೆ.
ವಿಟ್ಲ ಪೊಲೀಸರ ತಂಡ ಆರೋಪಿ ಮತ್ತು 313 ಗೋಣಿಗಳ 15 ಟನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
Follow us on Social media