ಕುಂಬಳೆ : ವಿದ್ಯಾರ್ಥಿಯೋರ್ವ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಂಬಳೆ ಬಳಿಯ ಮುಜಂಗಾವು ಕ್ಷೇತ್ರದ ಕೊಳದಲ್ಲಿ ನಡೆದಿದೆ.
ಸೂರಂಬೈಲು ಗೋಪಾಲ ಅವರ ಪುತ್ರ, ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಶರತ್ (17) ಮೃತಪಟ್ಟ ವಿದ್ಯಾರ್ಥಿ. ಘಟನೆ ಶನಿವಾರ ಸಂಭವಿಸಿದ್ದು, ಕೆರೆಯ ಪಕ್ಕದಲ್ಲಿ ವಿದ್ಯಾರ್ಥಿಯ ಮೊಬೈಲ್, ಚಪ್ಪಲಿ ಪತ್ತೆಯಾಗಿತ್ತು. ಶೀಘ್ರ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಯ ಮೃತದೇಹವನ್ನು ಮೇಲಕ್ಕೆತ್ತಿದರು. ಬಳಿಕ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಮೃತ ವಿದ್ಯಾರ್ಥಿಯು ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
Follow us on Social media