ಬಂಟ್ವಾಳ : ಗ್ರಾಮ ಪಂಚಾಯತ್ ಒಂದರ ತ್ಯಾಜ್ಯ ವನ್ನು ಇನ್ನೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಪ್ ಮಾಡಿ ಪರಾರಿಯಾದ ಗುತ್ತಿಗೆದಾರ , ತ್ಯಾಜ್ಯ ಡಂಪ್ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಗ್ರಾ.ಪಂ.ಅತನಿಂದಲೇ ತ್ಯಾಜ್ಯ ವನ್ನು ವಾಪಾಸು ತೆಗೆಸಿದ್ದಲ್ಲದೆ,ಸಾವಿರಾರು ರೂ ದಂಡ ವಿಧಿಸಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗೆ ಪಾತ್ರವಾಗಿದೆ.ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ಎಂಬಲ್ಲಿ ಈ ಘಟನೆ ಸಂಭವಿಸಿದೆ.
ಗುರುವಾರ ರಾತ್ರಿ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ರಸ್ತೆ ಬದಿ ಯಲ್ಲಿ ರಾಶಿ ಗಟ್ಟಲೆ ಕಸವನ್ನು ಯಾರೋ ವಾಹನದಲ್ಲಿ ಬಂದು ಎಸೆದು ಹೋದ ಬಗ್ಗೆ ಗ್ರಾ.ಪಂ.ಗೆ ಸ್ಥಳೀಯ ರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಸ ಡಂಪ್ ಮಾಡಿದ ಬಗ್ಗೆ ಮಾಹಿತಿ ಕಲೆಹಾಕಲು ಗ್ರಾ.ಪಂ.ಪಿ.ಡಿ.ಒ.ರವಿ ಮುಂದಾದರು. ಯಾವುದೇ ಸುಳಿವು ಸಿಗದೇ ಇದ್ದಾಗ ಗ್ರಾ.ಪಂ.ನ ಬಿಲ್ ಕಲೆಕ್ಟರ್ ಚೇತನ್ ಎಂಬವರು ತ್ಯಾಜ್ಯ ದಲ್ಲಿ ಯಾವುದಾದರೂ ಸುಳಿವು ಸಿಗಬಹುದು ಎಂದು ಹುಡುಕಾಟ ನಡೆಸಿದ್ದಾರೆ.
ಹೀಗೆ ಹುಡುಕಾಡಿದಾಗ ಪರಂಗಿಪೇಟೆ ಬಾರ್ ಒಂದರ ಬಿಲ್ ಪತ್ತೆ ಯಾಗಿತ್ತು. ಅ ಬಿಲ್ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದಾಗ ಅದು ಪುದು ಗ್ರಾ.ಪಂ.ನ ತ್ಯಾಜ್ಯ ಎಂದು ಖಾತ್ರಿ ಯಾಯಿತು. ಅಬಳಿಕ ಪುದು ಗ್ರಾಮಪಂಚಾಯತ್ ನ್ನು ಸಂಪರ್ಕ ಮಾಡಿ ವಿಚಾರ ತಿಳಿಸಿದಾಗ ಅವರು ಅಲ್ಲಿನ ತ್ಯಾಜ್ಯ ವಿಲೇವಾರಿ ಯನ್ನು ಸ್ಥಳೀಯ ವ್ಯಕ್ತಿಯೋರ್ವನಿಗೆ ಗುತ್ತಿಗೆ ನೀಡಲಾಗಿದ್ದು ಆತ ಕಸವನ್ನು ವಾಹನದ ಮೂಲಕ ಇಲ್ಲಿ ಡಂಪ್ ಮಾಡಿ ಹೋಗಿರುವ ಬಗ್ಗೆ ಸತ್ಯ ವಿಚಾರ ತಿಳಿದ ಬಳಿಕ ಗುತ್ತಿಗೆ ದಾರರನ್ನು ಕರೆಯಿಸಿ ಅತನಿಂದಲೇ ಕಸವನ್ನು ತೆಗೆಸಿದ್ದಲ್ಲದೆ ಅತನಿಗೆ 5000 ಸಾವಿರ ರೂ ದಂಡವನ್ನು ವಿಧಿಸಿದ್ದಾರೆ.ತಾಜ್ಯವನ್ನು ಅವರಿಂದಲೇ ತೆಗೆಸಿ 5000/- ದಂಡ ಕಟ್ಟಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರವಿ. ಬಿ ಹಾಗು ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಅವರಿಗೆ ಇಡೀ ಗ್ರಾಮದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಮಾದರಿ ಇತರ ಗ್ರಾ.ಪಂ. ಹಾಗೂ ಪುರಸಭೆಯಲ್ಲಿ ನಡೆದರೆ ತ್ಯಾಜ್ಯ ಮುಕ್ತ ಸುಂದರ ಬಂಟ್ವಾಳ ನಿರ್ಮಾಣಕ್ಕೆ ಸಹಕಾರಿಯಾಗಬಹುದು.
Follow us on Social media