ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ಮಹಿಳೆ ಮತ್ತಾಕೆಯ ಪುತ್ರಿಗೆ 45,50,000 ರೂ. ವಂಚಿಸಿದ ಸಂಬಂಧ ಆರು ಮಂದಿಯ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಎಸಗಿದ ವಿಮಾನ ನಿಲ್ದಾಣ ರಸ್ತೆಯ ಆಪಲ್ ಮಾರ್ಟ್ ಹಿಂಭಾಗದ ಇನ್ಲ್ಯಾಂಡ್ ವಿಂಡ್ಸ್ಸರ್ನಲ್ಲಿ ವಾಸಿಸುವ ಗ್ರೆನ್ವಿಲ್ ವಾಸ್ ಮತ್ತು ಲಾವಣ್ಯ, ಲೋಯ್ಡ್ ಮಾರ್ಟಿಸ್, ಫ್ಲೋರಾ ಮಾರ್ಟಿಸ್, ರೊನಾಲ್ಡ್ ಮತ್ತು ಮೆಲಿಸಾ ಪಿರೇರಾ ಅವರ ವಿರುದ್ದ ದೂರು ದಾಖಲಿಸಲಾಗಿದೆ. ಶೋಭಾ ಅಂಚನ್ ದೂರು ದಾಖಲಿಸಿದವರು.
ಶೋಭಾ ಅವರ ಪುತ್ರಿ ಸಂಗೀತಾ ಅವರು ಮೆಲಿಸಾ ಪಿರೇರಾ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಲೋಯ್ಡ್ ಮಾರ್ಟಿಸ್ ಆಕೆಗೆ ಗ್ರಿನ್ವಿಲ್ ಮತ್ತು ಲಾವಣ್ಯ ರೋಡ್ರಿಗಸ್ ಅವರನ್ನು ಪರಿಚಯ ಮಾಡಿಕೊಡಲಾಗಿತ್ತು. ಬಳಿಕ ಲಾವಣ್ಯಾ ಸಂಗೀತಾಳ ಬಳಿ ಆಕೆಯ ಪತಿ ಲೋಯ್ಡ್ ಮುಂಬೈಯ ಮೀರಾ ರಸ್ತೆಯಲ್ಲಿರುವ ಷೇರು ಮಾರುಕಟ್ಟೆ ಗೋಧಿಲ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ಅಲ್ಲದೆ, ಇದರ ಶಾಖೆ ಮಂಗಳೂರಿನಲ್ಲಿಯೂ ಆರಂಭವಾಗಿರುವುದಾಗಿ ಹಾಗೂ ಇದರ ಸಂಪೂರ್ಣ ಉಸ್ತುವಾಯನ್ನು ಮುಂಬರುವ ದಿನಗಳಲ್ಲಿ ತನ್ನ ಪತಿಯೇ ನೋಡಿಕೊಳ್ಳಲಿದ್ದಾರೆ ಎಂದೂ ಹೇಳಿದ್ದಳು. ಗೋಧಿಲ್ನಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ 37 ದಿನಗಳಲ್ಲಿಯೇ ಹೂಡಿಕೆದಾರರಿಗೆ ಶೇ. 30 ಬಡ್ಡಿ ಸಿಗಲಿದೆ ಎಂದು ನಂಬಿಸಿದ್ದಳು. ಇದನ್ನು ನಂಬಿದ್ದ ಸಂಗೀತಾ 45,50,000 ರೂ.ಗಳನ್ನು 2020 ಹೂಡಿಕೆ ಮಾಡಿದ್ದಳು.
ಗ್ರಿನ್ವಿಲ್ ವಾಸ್ ಮತ್ತು ಲೋಯ್ಡ್ ಮಾರ್ಟಿಸ್ನ ಖಾತೆಗೆ ಎಲ್ಲಾ ಹಣವನ್ನು ಆಕೆ ಕಳುಹಿಸಿದ್ದಳು. ಆದರೆ ಇಲ್ಲಿಯವರೆಗೆ ಆರೋಪಿಗಳ ಹಣವನ್ನೂ ಹಿಂತಿರುಗಿಸದೆ, ಬಡ್ಡಿಯನ್ನೂ ನೀಡದೆ ವಂಚಿಸಿದ್ದಾರೆ. ಮಾರ್ಟಿಸ್ ಮತ್ತು ರೊನಾಲ್ಡ್ ಆರೋಪಿಗಳಿಗೆ ಇದಕ್ಕಾಗಿ ಸಹಾಯ ಮಾಡಿದ್ದಾರೆ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು 2021 ಡಿಸೆಂಬರ್ನಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
Follow us on Social media