ನವದೆಹಲಿ : ದೇಶದಾದ್ಯಂತ ಕೋವಿಡ್ -19 ಪ್ರಕರಣ ಹೆಚ್ಚುತ್ತಿದ್ದು ನಾಲ್ಕನೇ ಅಲೆಗೆ ಸಾಕ್ಷಿಯಾಗಿರುವಂತೆಯೇ, ಭಾರತದಲ್ಲಿ ಪ್ರಾಣಿಗಳಿಗೆ ಮೊದಲ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಪ್ರಾಣಿಗಳಿಗೆ ಮೊಟ್ಟಮೊದಲ ಸ್ವದೇಶಿ ಕೋವಿಡ್ -19 ಲಸಿಕೆ ಅನೋಕೊವಾಕ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ.ಪ್ರಾಣಿಗಳಿಗೆ ಹೊಸ ಲಸಿಕೆ ಅನೋಕೊವಾಕ್ಸ್ ಅನ್ನು ಹರಿಯಾಣ ಮೂಲದ ಕೃಷಿ-ಸಂಶೋಧನಾ ಸಂಸ್ಥೆ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವಿನ್ಸ್ (ಎನ್ಆರ್ಸಿ) ಅಭಿವೃದ್ಧಿಪಡಿಸಿದೆ.ಈ ಹೊಸ ಕೊವಿಡ್ ಲಸಿಕೆ ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳಿಗೆ ಬಹಳ ಸುರಕ್ಷಿತವಾಗಿದೆ. ವಿಜ್ಞಾನಿಗಳ ಅವಿರತ ಕೊಡುಗೆಗಳಿಂದಾಗಿ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿದೆ.
ಇದು ನಿಜವಾಗಿಯೂ ದೊಡ್ಡ ಸಾಧನೆಯಾಗಿದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಹೇಳಿಕೆಯಲ್ಲಿ ಅನೋಕೊವಾಕ್ಸ್ನಿಂದ ಉಂಟಾಗುವ ರೋಗನಿರೋಧಕ ಶಕ್ತಿಯು SARS-CoV-2 ನ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಎಂದು ಹೇಳಿದೆ.
Follow us on Social media