ಬಂಟ್ವಾಳ : ಆರ್.ಎಸ್.ಎಸ್. ಸಂಘಟನೆಯ ಬಗ್ಗೆ ಕೀಳು ಪದ ಉಪಯೋಗಿಸಿ ಮಾತನಾಡಿದವರ ಬಗ್ಗೆ ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು, ನಾಲಗೆ ಇದೆ ಎಂದು ಅಸಂಬದ್ಧವಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಮಾತಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕಳೆದ 97 ವರ್ಷಗಳಿಂದ ದೇಶಕ್ಕಾಗಿ ಬದುಕುತ್ತಿರುವ, ಸೇವೆಯನ್ನು ಕಣ್ಣ ಮುಂದೆ ಇಟ್ಟುಕೊಂಡು, ಕೋಟಿ ಕೋಟಿ ಜನರಿಗೆ ದೇಶಕ್ಕೋಸ್ಕರ ಬದುಕುವ ಚಿಂತನೆ ನಡೆಸುತ್ತಿರುವ ಏಕೈಕ ಸಂಸ್ಥೆ ಅದು ಆರ್.ಎಸ್.ಎಸ್. ಇದರ ಬಗ್ಗೆ ಮಾತನಾಡಲು ಇವರಲ್ಲಿ ಏನಿದೆ ನೈತಿಕತೆ ಎಂದು ಅವರು ಗುಡುಗಿದ್ದಾರೆ.ಸುಮಾರು ವರ್ಷಗಳ ಹಿಂದೆ ಮುಸ್ಲಿಂ ದೇಶಕ್ಕೆ ಹೊರಟ ಎರಡು ವಿಮಾನಗಳು ರಾಜಸ್ಥಾನದಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ತಕ್ಷಣ ಅಲ್ಲಿ ಹೋಗಿದ್ದು ಆರ್.ಎಸ್.ಎಸ್.ಸಂಘಟನೆ, ಅಲ್ಲಿ ಹೋಗಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಶವ ಹಾಗೂ ಚಿನ್ನಾಭರಣಗಳನ್ನು ಅವರ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿದ ಬಳಿಕ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಅಲ್ಲಿಗೆ ಬೇಟಿ ನೀಡಿ ಮೊತ್ತಮೊದಲ ಬಾರಿಗೆ ಆರ್.ಎಸ್.ಎಸ್.ಬಗ್ಗೆ ಹೊಗಳಿ ಮಾತನಾಡಿದರು.ನಾನು ಆರ್.ಎಸ್.ಎಸ್. ಅಂದರೆ ಬೇರೆ ಅಂತ ತಿಳಿದುಕೊಂಡಿದ್ದೆ , ಆದರೆ ನಿಜವಾಗಿ ಆರ್.ಎಸ್.ಎಸ್.ನವರು ಸಮಾಜ ಸೇವೆ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಇದು ಆರ್ ಎಸ್. ಎಸ್.ನ ಇತಿಹಾಸ ನಿರ್ಮಾಣ.
ಸರ್ವ ಸಾಮಾನ್ಯ ರಿಗೋಸ್ಕರ ಬದುಕುವುದು ಸಂಘದ ಮೂಲ ಉದ್ದೇಶ. ದಿನ ನಿತ್ಯ ಭಾರತ್ ಮಾತ ಕೀ ಜೈ ಅಂತ ಹೇಳಿದರೆ ಅದು ಸಂಘದ ಕಾರ್ಯಕರ್ತರು ಮಾತ್ರ. ಇವರು ಇಟಲಿಯವರಿಗೆ ಜೈ ಕಾರ ಹಾಕಿದವರು.ದೇಶ ವಿಭಜನೆ ಮಾಡಿದ್ದು ಯಾರು? ಸಮಾಜ ವಿಭಜನೆ ಮಾಡಿದ್ದು ಯಾರು? ನೆಹರು , ಗಾಂಧೀಜಿಯವರು ಎಂಬುದು ಇವರಿಗೆ ನೆನಪಿದೆಯಾ? ಅ ಮೂರೇ ಜನ ಇದ್ದದ್ದು, ಮುಸ್ಲಿಂ ಲೀಗ್, ಕಾಂಗ್ರೆಸ್, ಬ್ರಿಟಿಷ್ ರು .ಇವರು ದೇಶ ವಿಭಜನೆ ಮಾಡಿ ಇಷ್ಟು ದೊಡ್ಡ ಆಪತ್ತು ಬಂದಿದೆ ಅಲ್ವಾ ಅದನ್ನು ನಾವು ಒಪ್ಪಿಕೊಳ್ಳಬೇಕಲ್ವ ಎಂದು ಅವರು ಪ್ರಶ್ನಿಸಿದರು. ದೇಶ ವಿಭಜನೆಯ ಕಾರಣ ನಿತ್ಯ ನಿರಂತರ ತಲೆ ಬಿಸಿ ಆಗುವಂತೆ ಮಾಡಿದ್ದು ಕಾಂಗ್ರೇಸ್ ಅಲ್ವಾ,ಹೊರಗಿನಿಂದ ಆಕ್ರಮಣ, ಒಳಗಿನಿಂದ ಅಕ್ರಮಣ,ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಲು ಅವಕಾಶ ನೀಡಿ ದ್ದು ಕಾಂಗ್ರೇಸ್ ಅಲ್ವವೇ ಎಂದು ಪ್ರಶ್ನೆ ಮಾಡಿದರು.
Follow us on Social media