Breaking News

ಮಂಗಳೂರು: ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ – ರಿಕ್ಷಾ ಚಾಲಕ ಬಂಧನ

ಮಂಗಳೂರು : ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ರಿಕ್ಷಾ ಚಾಲಕನೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮುನ್ನೂರು ಗ್ರಾಮದ ಸಮೀರ್ (22) ಎಂದು ಗುರುತಿಸಲಾಗಿದೆ.ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಜೊತೆ ಸಮೀರ್ ಅನುಚಿತವಾಗಿ ವರ್ತಿಸಿದ್ದು, ಮಹಿಳೆ ಈ ವಿಚಾರವನ್ನು ತನ್ನ ಮಗನ ಬಳಿ ತಿಳಿಸಿದ್ದು, ಅದರಂತೆ ಆತ ರಿಕ್ಷಾ ಚಾಲಕನ ಬಳಿ ವಿಚಾರಿಸಿದಾಗ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಮೀರ್‌ನನ್ನು ಇಂದು ಬಂಧಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×