Breaking News

ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಹೊಸ ಐಫೋನ್-13 ಪ್ರೊ ಸೀರೀಸ್ ಬಿಡುಗಡೆ; ದರ, ಇತರೆ ಮಾಹಿತಿ ಇಲ್ಲಿದೆ!

ವಾಷಿಂಗ್ಟನ್: ನಿರೀಕ್ಷೆಯಂತೆಯೇ ಈ ವರ್ಷ ಖ್ಯಾತ ಆ್ಯಪಲ್ ಸಂಸ್ಥೆ ತನ್ನ ನೂತನ ಸರಣಿಯ ಗ್ಯಾಜೆಟ್ ಗಳನ್ನು ಬಿಡುಗಡೆ ಮಾಡಿದ್ದು,  ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಬಿಡುಗಡೆ ಮಾಡಿದೆ.

ಐಫೋನ್ 13 ಸರಣಿಯಲ್ಲಿ, ಐಫೋನ್ 13, 13 ಮಿನಿ ಮತ್ತು ಐಫೋನ್ 13 ಪ್ರೊ ಹಾಗೂ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳನ್ನು ಆ್ಯಪಸ್ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದ್ದು, ನೂತನ ಸರಣಿಯ ಐಪ್ಯಾಡ್ ಬೆಲೆ ದೇಶದಲ್ಲಿ 30,900 ರೂ ರಿಂದ ಆರಂಭವಾಗಲಿದೆ. ಐಪ್ಯಾಡ್ ಮಿನಿ ದರ 46,900 ರೂ ರಿಂದ ಆರಂಭವಾದರೆ, ಐಪೋನ್ 13 ಮಿನಿ ದರ 69,900 ರೂ ರಿಂದ ಮತ್ತು ಐಫೋನ್ 13 ಪ್ರೊ ಸರಣಿ ದರ 1,19,900ರೂ ದಿಂದ ಆರಂಭವಾಗುತ್ತದೆ.

ಇನ್ನು ನೂತನ ಐಪ್ಯಾಡ್ ಗಳು ತಕ್ಷಣದಿಂದಲೇ ಖರೀದಿಗೆ ಲಭ್ಯವಿದ್ದರೆ, ಐಫೋನ್ 13 ಸರಣಿ ಸೆ. 17ರಿಂದ ಪ್ರಿ ಬುಕಿಂಗ್ ಆರಂಭವಾಗಿ, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ಹೇಳಿದೆ.  ಐಫೋನ್ 13 ಸರಣಿಯಲ್ಲಿ ನಾಲ್ಕು ನೂತನ ಮಾದರಿಗಳು ದೊರೆಯಲಿದೆ. 

ಕಳೆದ ವರ್ಷ ಪರಿಚಯಿಸಿದ್ದ ಐಫೋನ್ 12ಗೆ ಹೋಲಿಸಿದರೆ, ಬ್ಯಾಟರಿ, ಡಿಸ್‌ಪ್ಲೇ ಮತ್ತು ಕ್ಯಾಮರಾ, ಆ್ಯಪಲ್ ಚಿಪ್ ಹಾಗೂ ತಾಂತ್ರಿಕ ವೈಶಿಷ್ಟ್ಯಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿದೆ ಎಂದು ಆ್ಯಪಲ್ ಹೇಳಿದೆ.

ಯಾವೆಲ್ಲ ಮಾದರಿ ಬಿಡುಗಡೆ?
ಆ್ಯಪಲ್ ಐಫೋನ್ 13 ಸರಣಿಯಲ್ಲಿ ಹೊಸದಾಗಿ, ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದೆ. ಈ ಬಾರಿ ಆರಂಭಿಕ ಆವೃತ್ತಿಯಲ್ಲಿ 128 GB ಸ್ಟೋರೇಜ್ ಪರಿಚಯಿಸಿರುವ ಆ್ಯಪಲ್, ಟಾಪ್ ಆವೃತ್ತಿಯಲ್ಲಿ 1TB ಮೆಮೊರಿ ಅಳವಡಿಸಿದೆ.

ಯಾವಾಗ, ಎಲ್ಲೆಲ್ಲಿ ಲಭ್ಯ?
ಹೊಸ ಸರಣಿಯ ಆ್ಯಪಲ್ ಐಫೋನ್ ಸೆ. 17ರಿಂದ ಪ್ರಿ ಬುಕಿಂಗ್ ಲಭ್ಯವಿದ್ದು, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಆ್ಯಪಲ್ ಇಂಡಿಯಾ ಆನ್‌ಲೈನ್ ಸ್ಟೋರ್, ಪ್ರಮುಖ ರಿಟೇಲ್ ಮತ್ತು ಆನ್‌ಲೈನ್ ಶಾಪಿಂಗ್ ತಾಣಗಳ ಮೂಲಕ ನೂತನ ಐಫೋನ್ ಲಭ್ಯವಾಗಲಿದೆ.

ಭಾರತ ಹಾಗೂ ಅಮೆರಿಕ, ಬ್ರಿಟನ್, ಜಪಾನ್, ಚೀನಾ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಸೆಪ್ಟೆಂಬರ್ 17 ರಂದು ಪ್ರಿ ಆರ್ಡರ್ ಆರಂಭವಾಗಲಿದ್ದು, ಸೆಪ್ಟೆಂಬರ್ 24 ರಿಂದ ರಿಟೇಲ್ ಲಭ್ಯತೆ ಆರಂಭವಾಗಲಿದೆ.

iPhone 13, iPhone 13 mini, iPhone 13 Pro, iPhone 13 Pro Max ವಿಶೇಷತೆಗಳು
ಎಲ್ಲಾ ನಾಲ್ಕು ಹೊಸ ಐಫೋನ್ ಮಾದರಿಗಳನ್ನು ಆ್ಯಪಲ್‌ನ ಹೊಸ ಆಂತರಿಕ A15 ಬಯೋನಿಕ್ SoC ತಂತ್ರಜ್ಞಾನದಿಂದತಯಾರಿಸಲಾಗಿದೆ, ಇದು 6 ಕೋರ್ CPU, ಎರಡು ಉನ್ನತ-ಕಾರ್ಯಕ್ಷಮತೆ ಮತ್ತು ನಾಲ್ಕು ದಕ್ಷ ಕೋರ್‌ಗಳನ್ನು ಹೊಂದಿದೆ, ಜೊತೆಗೆ 16-ಕೋರ್ ನ್ಯೂರಲ್ ಎಂಜಿನ್ ಅನ್ನು ಕೂಡ ಹೊಂದಿದೆ. ಪ್ರಮುಖ ಸ್ಪರ್ಧಾತ್ಮಕ ಸ್ಮಾರ್ಟ್ ಫೋನ್ ಗಳಿಗಿಂತ ಶೇ. 50 ಪ್ರತಿಶತದಷ್ಟು ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಐಫೋನ್ 13 ಮತ್ತು ಐಫೋನ್ 13 ಮಿನಿ ಫೋರ್-ಕೋರ್ ಜಿಪಿಯು ಹೊಂದಿರುವ ಎ 15 ಬಯೋನಿಕ್ ಅನ್ನು ಹೊಂದಿದ್ದರೆ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಐದು ಕೋರ್ ಇಂಟಿಗ್ರೇಟೆಡ್ ಜಿಪಿಯು ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ
ಈ ಹಿಂದಿನಂತೆ ಈಗಲೂ ಆ್ಯಪಲ್ ಅಧಿಕೃತವಾಗಿ RAM ನ ಪ್ರಮಾಣ ಮತ್ತು ಬ್ಯಾಟರಿ ಸಾಮರ್ಥ್ಯಗಳನ್ನು ಬಹಿರಂಗಪಡಿಸಿಲ್ಲ. ಹಿಂದಿನ ಆವೃತ್ತಿಯ ಗ್ಯಾಜೆಟ್ ಗಳಿಗೆ ಹೋಲಿಕೆ ಮಾಡಿದರೆ ಆ್ಯಪಲ್ ಐಫೋನ್ 13 ಮಿನಿ ಮತ್ತು ಐಫೋನ್ 13 ಪ್ರೊಗಳಲ್ಲಿ 1.5 ಗಂಟೆಗಳ ಹೆಚ್ಚುವರಿ ಉತ್ತಮ ಬ್ಯಾಟರಿ ಬಾಳಿಕೆ ಇದೆ ಎನ್ನಲಾಗಿದೆ. ಐಫೋನ್ 13 ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಈ ಹಿಂದಿನ ಆವೃತ್ತಿಗಿಂತ 2.5 ಗಂಟೆಗಳ ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಐಫೋನ್ 13 ಮತ್ತು ಐಫೋನ್ 13 ಮಿನಿ 256GB ಗಿಂತ ಹೆಚ್ಚಿನ ಸಂಗ್ರಹಣೆಯೊಂದಿಗೆ ಲಭ್ಯವಿರುವ ಮೊದಲ ಪ್ರೊ-ಅಲ್ಲದ ಐಫೋನ್ ಆಗಿದ್ದು, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಗಳು 1TB ಸಂಗ್ರಹಣೆಯೊಂದಿಗೆ ಕಳುಹಿಸಿದ ಮೊದಲ ಐಫೋನ್ಗಳಾಗಿವೆ. 

ಸ್ಕ್ರೀನ್ ಸಾಮರ್ಥ್ಯ
ಈ ಹಿಂದಿನ ಆವೃತ್ತಿಗಳಂತೆಯೇ ಹಾಲಿ ಬಿಡುಗಡೆಯಾಗಿರುವ ನೂತನ ಆ್ಯಪಲ್ 13 ಸರಣಿಯಲ್ಲಿ ಸ್ಕ್ರೀನ್ ಗಾತ್ರವನ್ನು ಈ ಹಿಂದಿನಂತೆಯೇ ಮುಂದುವರೆಸಲಾಗಿದೆ. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಸಹ ಸುಧಾರಿತ ಬ್ರೈಟ್ ನೆಸ್ ಪಡೆಯುತ್ತವೆ.

ಕ್ಯಾಮೆರಾ ಸಾಮರ್ಥ್ಯ
ಐಫೋನ್ 13 ಮತ್ತು ಐಫೋನ್ 13 ಮಿನಿ ಹೊಸ ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದ್ದು, ಕಡಿಮೆ ಶಬ್ದ ಮತ್ತು ಪ್ರಕಾಶಮಾನವಾದ ಫಲಿತಾಂಶಗಳಿಗಾಗಿ ಶೇ.47ರಷ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ. ಇದು 1.7um ಸೆನ್ಸರ್ ಪಿಕ್ಸೆಲ್‌ಗಳು ಮತ್ತು f/1.6 ಅಪರ್ಚರ್ ಹೊಂದಿದೆ, ಜೊತೆಗೆ iPhone 12 Pro Max ನಿಂದ ಸೆನ್ಸರ್-ಶಿಫ್ಟ್ ಆಪ್ಟಿಕಲ್ ಸ್ಟೆಬಿಲೈಸೇಶನ್ ಹೊಂದಿದೆ. ನೈಟ್ ಮೋಡ್ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ತೀಕ್ಷ್ಣವಾದ ಫೋಟೋಗಳನ್ನು ಸೆರೆಹಿಡಿಯುತ್ತದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಎಫ್/2.4 ಅಪರ್ಚರ್ ಹೊಂದಿದೆ. ಚಲಿಸುವಾಗಲೂ ವಸ್ತುಗಳ ನಡುವೆ ಗಮನವನ್ನು ಬದಲಾಯಿಸಲು, ಹೊಸ ಸಿನಿಮೀಯ ವೀಡಿಯೋ ಮೋಡ್ ರ್ಯಾಕ್ ಫೋಕಸ್ ಅನ್ನು ಇದು ಬೆಂಬಲಿಸುತ್ತದೆ. ಬಳಕೆದಾರರ ಗಮನ ಸೆಳೆಯಲು ಛಾಯಾಗ್ರಹಣದ ನಿರ್ದೇಶಕರು ಮಾಡುವ ಸೃಜನಶೀಲ ಆಯ್ಕೆಗಳನ್ನು ಅಧ್ಯಯನ ಮಾಡಿ ಈ ನೂತನ ಫೋನ್ ಗಳಲ್ಲಿ ಆ ತಂತ್ರಗಾರಿಕೆಯನ್ನು ಅಳವಡಿಸಲಾಗಿದೆ ಎಂದು ಆ್ಯಪಲ್ ಹೇಳಿದೆ.

ಐಫೋನ್ 13 ಪ್ರೊ ಮಾದರಿಗಳು ಹೊಸ 77 ಎಂಎಂ ಟೆಲಿಫೋಟೋ ಕ್ಯಾಮರಾವನ್ನು ಹೊಂದಿದ್ದು 3 ಎಕ್ಸ್ ಆಪ್ಟಿಕಲ್ ಜೂಮ್, ಅಲ್ಟ್ರಾ-ವೈಡ್ ಕ್ಯಾಮೆರಾದ ನೆರವಿನಿಂದ ಈಗ ಒಂದು ವಸ್ತುವಿನ 2 ಸೆಂಮೀ ವರೆಗೆ ಮ್ಯಾಕ್ರೋ ಶಾಟ್ ತೆಗೆದುಕೊಳ್ಳಬಹುದು. ಎಫ್/1.5 ಅಪರ್ಚರ್ ಮತ್ತು 1.9 ಎಮ್ ಸೆನ್ಸರ್ ಹೊಂದಿರುವ ಪ್ರಾಥಮಿಕ ವೈಡ್ ಕ್ಯಾಮೆರಾ ಪಿಕ್ಸೆಲ್‌ಗಳು. ಟ್ರೈಪಾಡ್ ಬಳಸುವಾಗ ಕಡಿಮೆ ಶಬ್ದ, ವೇಗದ ಶಟರ್ ಮತ್ತು ಉದ್ದದ ಬ್ರಾಕೆಟ್ ಗಳಿಗಾಗಿ ಇದು ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ ಎಂದು ಹೇಳಲಾಗಿದೆ. ಟೆಲಿಫೋಟೋ ಒಂದನ್ನು ಒಳಗೊಂಡಂತೆ ಎಲ್ಲಾ ಕ್ಯಾಮೆರಾಗಳು ಈಗ ಕಂಪ್ಯೂಟೇಶನಲ್ ಫೋಟೋಗ್ರಫಿಯಿಂದಾಗಿ ನೈಟ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ. 

ಬೆಲೆ ವಿವರ (ಸ್ಟೋರೇಜ್ ಸಾಮರ್ಥ್ಯಕ್ಕೆ ಅನುಗುಣವಾಗಿ)
ಆ್ಯಪಲ್ ಐಫೋನ್ 13 ಮಿನಿ

128 GB-69,900ರೂ
256 GB-79,900ರೂ
512 GB-99,900 ರೂ

ಆ್ಯಪಲ್ ಐಫೋನ್ 13
128 GB- 79,900 ರೂ
256 GB- 89,900 ರೂ
512 GB- 109,900ರೀ 

ಆ್ಯಪಲ್ ಐಫೋನ್ 13 ಪ್ರೊ
128 GB-1,19,900 ರೂ
256 GB-1,29,900 ರೂ
512 GB-1,49,900 ರೂ
1 TB-1,69,900 ರೂ

ಆ್ಯಪಲ್ ಐಫೋನ್ 13 ಪ್ರೊ ಮ್ಯಾಕ್ಸ್
128 GB-1,29,900 ರೂ
256 GB-1,39,900 ರೂ
512 GB-1,58,900 ರೂ
1 TB -1,79,900 ರೂ

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×