ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ 318ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 42.1 ಓವರ್ ನಲ್ಲಿ 251 ರನ್ ಗಳಿಸಿ ಆಲೌಟ್ ಆಯಿತು, ಆ ಮೂಲಕ ಭಾರತದ ಎದುರು 66ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೇರ್ ಸ್ಟೋ ಮತ್ತು ಜೇಸನ್ ರಾಯ್ ಸ್ಫೋಟಕ ಆರಂಭ ನೀಡಿದ್ದರು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 135 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ 46ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ನಿಂತಿದ್ದ ಜೇಸನ್ ರಾಯ್ ರನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಔಟ್ ಮಾಡಿದರು. ಇವರ ಬೆನ್ವಲ್ಲೇ ಮಧ್ಯಮ ಕ್ರಮಾಂಕದ ಆಟಗಾರ ಬೆನ್ ಸ್ಟೋಕ್ಸ್ ಕೇವಲ 1 ರನ್ ಗಳಿಸಿ ಮತ್ತೆ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು.
ಬಳಿಕ 94 ರನ್ ಗಳಿಸಿ ಭಾರತಕ್ಕೆ ಅಪಾಯಕಾರಿ ಮಾರ್ಪಟ್ಟಿದ್ದ ಜಾನಿ ಬೇರ್ ಸ್ಟೋ ರನ್ನು ಶಾರ್ದೂಲ್ ಠಾಕೂರ್ ಔಟ್ ಮಾಡಿದರು. ಬೇರ್ ಸ್ಟೋವ್ ಔಟಾಗುತ್ತಿದ್ದಂತೆಯೇ ಭಾರತ ತಂಡ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಧ್ಯಮ ಕ್ರಮಾಂಕ ಕುಸಿಯತೊಡಗಿತು. ಇಯಾನ್ ಮಾರ್ಗನ್ 22ರನ್ ಗಳಿಸಿ ಔಟಾದರೆ, ಸ್ಯಾಮ್ ಬಿಲ್ಲಿಂಗ್ಸ್ 18 ಮತ್ತು ಮೊಯಿನ್ ಅಲಿ 30 ರನ್ ಗಳಿಸಿ ಔಟಾದರು. ಬಳಿಕ ಸ್ಯಾಮ್ ಕರ್ರನ್ 12, ಟಾಮ್ ಕರ್ರನ್ 11ಗಳಿಸಿ ಔಟಾದರು. ಅಂತಿಮವಾಗಿ ಇಂಗ್ಲೆಂಡ್ ತಂಡ 42.1 ಓವರ್ ನಲ್ಲಿ 251 ರನ್ ಗಳಿಸಿ ಆಲೌಟ್ ಆಯಿತು, ಆ ಮೂಲಕ ಭಾರತದ ಎದುರು 66ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಪರ ಪ್ರಸಿದ್ದ್ ಕೃಷ್ಣ 4 ವಿಕೆಟ್ ಪಡೆದರೆ, ಶಾರ್ಧೂಲ್ ಠಾಕೂರ್ 3 ಪಡೆದರು. ಉಳಿದಂತೆ ಭುವನೇಶ್ವರ್ ಕುಮಾರ್ 2 ಮತ್ತು ಕೃಣಾಲ್ ಪಾಂಡ್ಯ1 ವಿಕೆಟ್ ಪಡೆದು ಮಂಚಿದರು.
Follow us on Social media