ಬೆಳಗಾವಿ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾಮದ್ಯ ಮತ್ತು ಒಂದು ವಾಹನವನ್ನು ಕರ್ನಾಟಕ-ಗೋವಾ ಗಡಿಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಅಧಿಕಾರಿಗಳ ಪ್ರಕಾರ, ಗಸ್ತು ತಿರುಗುತ್ತಿದ್ದ ವೇಳೆ ನಾಲ್ಕು ಚಕ್ರದ ವಾಹನವೊಂದರಲ್ಲಿ ಗೋವಾದ ವಿವಿಧ ಬ್ರಾಂಡ್‌ಗಳ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಳ್ಲಲಾದ ಮದ್ಯದ ಅಂದಾಜು ಮೌಲ್ಯ 6.28 ಲಕ್ಷ ಎಂದು ಹೇಳಲಾಗಿದೆ.
ವಾಹನವನ್ನು ವಶಪಡಿಸಿಕೊಳ್ಳುವ ಮೊದಲು ಅಧಿಕಾರಿಗಳು ಅದನ್ನು ಬೆನ್ನಟ್ಟಿದ್ದಾರೆ ಎಂದು ತಿಳಿದುಬಂದಿದ್ದು ಚಾಲಕ ತಪ್ಪಿಸಿಕೊಂಡಿದ್ದಾನೆ. ಅಬಕಾರಿ ಅಧಿಕಾರಿಗಳು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow us on Social media