ಲಖನೌ: ಉತ್ತರಾಖಂಡದ ಹಿಮ ಸ್ಫೋಟದಲ್ಲಿ ಇಲ್ಲಿಯವರೆಗೂ ಸುಮಾರು 26 ಮೃತದೇಹಗಳು ಪತ್ತೆಯಾಗಿವೆ. ಇನ್ನು ತಪೋವನ್ ವಿದ್ಯುತ್ ಯೋಜನೆ ಸ್ಥಳದಲ್ಲಿ ಉತ್ತರ ಪ್ರದೇಶದ ಸುಮಾರು 55 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ತಪೋವನ್ ವಿದ್ಯುತ್ ಸ್ಥಾವರದ ಬಳಿಯ ಸುರಂಗದಲ್ಲಿ ಪವರ್ ಪ್ಲಾಂಟ್ ನ ಹಿರಿಯ ಅಧಿಕಾರಿಗಳು, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 171 ಮಂದಿ ನಾಪತ್ತೆಯಾಗಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ 55 ಕಾರ್ಮಿಕರು ನಾಪತ್ತೆಯಾಗಿದ್ದು ಯೋಗಿ ಸರ್ಕಾರ ತುರ್ತು ನಿಯಂತ್ರಣ ಕೊಠಡಿ ಸ್ಥಾಪಿಸಿದ್ದು 1070 ಮತ್ತು 9454441036 ಎಂಬ ಎರಡು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು ಉತ್ತರ ಪ್ರದೇಶ ಉತ್ತರಾಖಂಡಕ್ಕೆ ಸಹಾಯಹಸ್ತ ಚಾಚಿದೆ.
ಉತ್ತರ ಪ್ರದೇಶ ಸುಮಾರು 40 ಜನರ ಪಟ್ಟಿಯನ್ನು ಉತ್ತರಾಖಂಡ ಸರ್ಕಾರ ಪರಿಹಾರ ಆಯುಕ್ತರ ಕಚೇರಿ ಮತ್ತು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಅಲ್ಲದೆ ಕಾಣೆಯಾದವರ ವಿವರಗಳು ಪ್ರತಿ ಜಿಲ್ಲೆಯಿಂದ ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
Follow us on Social media