ಉಳ್ಳಾಲ: ಗುರುವಾರ ಸಂಜೆ ಭಾರೀ ಸಿಡಿಲಿಗೆ ಉಳ್ಳಾಲದ ಚೆಂಬುಗುಡ್ಡೆ ಮನೆಯೊಂದು ಕುಸಿದು, ಇಬ್ಬರು ಗಾಯಗೊಂಡು ಏಳು ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಸ್ಥಳಕ್ಕೆ ಶುಕ್ರವಾರ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು.
ಸಿಡಿಲಾಘಾತಕ್ಕೆ ಮನೆ ಕುಸಿದು ಮಹಮ್ಮದ್ ಅಬೂಬಕರ್ ಸಿದ್ದೀಖ್, ಹಂಝ ಸಹೋದರರು ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಕುಟುಂಬದ ಏಳು ಮಂದಿ ಮನೆಯೊಳಗೇ ಇದ್ದರೂ, ಪವಾಡಸದೃಶವಾಗಿ ಪಾರಾಗಿದ್ದಾರೆ.