ನವದೆಹಲಿ: ದೇಶದ ಸಮಸ್ತ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾನವಮಿಯ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ ಸಮಸ್ಯ ಜನತೆಗೆ ಮಹಾನವಮಿಯ ಶುಭಾಶಯಗಳು. ನವರಾತ್ರಿಯ ಈ ಶುಭ ದಿನದಂದು ದುರ್ಗಾ ದೇವಿಯ ಒಂಬತ್ತನೇ ರೂಪವನ್ನು ಸಿದ್ಧಿದತ್ರಿ ದೇವತೆಯಾಗಿ ಪೂಜಿಸಲಾಗುತ್ತದೆ. ಮಾ ಸಿದ್ಧಿದತ್ರಿ ಅವರ ಆಶೀರ್ವಾದದಿಂದ, ಪ್ರತಿಯೊಬ್ಬರೂ ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ನವರಾತ್ರಿಯ 9ನೇ ದಿನವನ್ನು ಮಹಾನವಮಿ ಎಂದು ಕರೆಯುತ್ತಾರೆ. ಆ ದಿನ ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಮಹಾ ನವಮಿಯನ್ನು ತಾಯಿ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂದು ಪೂಜಿಸಲಾಗುತ್ತದೆ.
ನವರಾತ್ರಿಯು ಪಶ್ಚಿಮ ಬಂಗಾಳದ ಹಬ್ಬವಾಗಿದ್ದು, ಗುಜರಾತ್, ರಾಜಸ್ಥಾನ, ಕರ್ನಾಟಕದಲ್ಲಿ ಇದರು ಬಹಳ ಜನಪ್ರಿಯವಾಗಿದೆ. ಭಾರತದ ಬಹುತೇಕ ಭಾಗಗಳಲ್ಲಿ ವಿವಿಧ ಹೆಸರಿನಿಂದ ನವರಾತ್ರಿಯನ್ನು ಆಚರಿಸುತ್ತಾರೆ. ಕರ್ನಾಟಕದಲ್ಲಿ ನಾಡ ಹಬ್ಬ ಎಂದೇ ಖ್ಯಾತಿಯಾಗಿರುವ ನವರಾತ್ರಿಯನ್ನು ಮೈಸೂರಿನಲ್ಲಿ ದಸರೆಯಾಗಿ ಆಚರಿಸುತ್ತಾರೆ. ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಊರೆಲ್ಲಾ ಮೆರವಣಿಗೆ ಮಾಡುವುದು ಜಂಬೂ ಸವಾರಿಯ ವಿಶೇಷ.
Follow us on Social media