ದುಬೈ: ಇಂದಿನ ಎರಡನೇ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್,12 ರನ್ ಅಂತರದ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಂಜಾಬ್ ಕೆಎಲ್ ರಾಹುಲ್ (27) ಮತ್ತು ಕ್ರಿಸ್ ಗೇಲ್ (20) ಮಂದೀಪ್ ಸಿಂಗ್ (17) ಮೂವರೂ ಸಾಧಾರಣ ಮೊತ್ತ ಪೇರಿಸಲಷ್ಟೇ ಸಾಧ್ಯವಾದ ಪರಿಣಾಮ ಹೈದರಾಬಾದ್ ವಿರುದ್ಧ ಸವಾಲಿನ ಮೊತ್ತ ಕಲೆಹಾಲುವಲ್ಲಿ ಎಡವಿ , 20 ಓವರ್ ಗಳಲ್ಲಿ 7 ವಿಕೆಟ್ ಗೆ 126 ರನ್ ಕಲೆ ಹಾಕಿತು.
ಸುಲಭ ಗೆಲುವಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 19.5 ಓವರ್ ಗಳಲ್ಲಿ 114 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ಹೈದರಾಬಾದ್ ಪರವಾಗಿ ಡೇವಿಡ್ ವಾರ್ನರ್ 35, ವಿಜಯ ಶಂಕರ್ 26 ರನ್ ಗಳಿಸಿದ್ದರೆ ಪಂಜಾಬ್ ಪರವಾಗಿ ಅರ್ಷದೀಪ್ ಸಿಂಗ್ ಹಾಗೂ ಕ್ರಿಸ್ ಜೋರ್ಡಾನ್ ತಲಾ 3 ವಿಕೆಟ್ ಪಡೆದು ಮಿಂಚಿದರು.
Follow us on Social media