ಮಂಗಳೂರು: ಜೋದ್ಪುರ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ 2019 ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಫೋಟೋಗ್ರಾಫರ್ ಅಪುಲ್ ಇರಾ ಅವರು ಸೆರೆ ಹಿಡಿದ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಜೋಧ್ ಪುರ್ ನ ಜೋಧಾನ ಫೋಟೋ ಜರ್ನಲಿಸ್ಟ್ ಸೊಸೈಟಿ ಆಯೋಜಿಸಿದ 5 ನೇ ನೇಚರ್ ವಿಭಾಗದಲ್ಲಿ “ನೋ ಸೇಫರ್ ಲ್ಯಾಂಡಿಂಗ್ ” ಎಂಬ ಶೀರ್ಷಿಕೆಯಡಿಯಲ್ಲಿ ಅಪುಲ್ ಸೆರೆಹಿಡಿದ ಚಿತ್ರಕ್ಕೆ ‘ಸರ್ಟಿಫಿಕೇಟ್ ಆಫ್ ಮೆರಿಟ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇವರು ಈಗಾಗಲೇ ಸೆರೆ ಹಿಡಿದ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Follow us on Social media