ಕೋಟ : ಸಾಲದ ಬಾಧೆಯಿಂದ ಮನನೊಂದು ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದ ಐರೋಡಿ ಗ್ರಾಮದ ಹಂಗಾರಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ಬಾಳ್ ಕುದ್ರುವಿನ ನಾಗರಾಜ ಮೊಗವೀರ (37) ಎಂದು ಗುರುತಿಸಲಾಗಿದೆ.
ನಾಗರಾಜ ಮೊಗವೀರ ಅವರು ಕೊರೊನಾ ಲಾಕ್‌ಡೌನ್ ಇರುವುದರಿಂದ ಕಳೆದ ಎರಡು ತಿಂಗಳಿನಿಂದ ಊರಿಗೆ ಬಂದು ಮನೆಯಲ್ಲಿಯೇ ಇರುತ್ತಾರೆ. ನಾಗರಾಜರವರು ತನ್ನ ತಂಗಿಯರಿಬ್ಬರ ಮದುವೆಗಾಗಿ ಬೇರೆ ಬೇರೆ ಕಡೆ ಸಾಲ ಮಾಡಿದ್ದರು. ಸಾಲದ ವಿಚಾರದಲ್ಲಿ ಯಾವಾಗಲೂ ಬೇಸರದಿಂದ ಇರುತ್ತಿದ್ದರು ಎಂದು ತಿಳಿದು ಬಂದಿದೆ.
ಆಗಸ್ಟ್ 21ರಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ನಾಗರಾಜರವರು ಆಗಸ್ಟ್ 22 ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಮೂರ್ತಿ ತರಲು ಇದೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದು ಹಂಗಾರ ಕಟ್ಟೆ ಯುವಕ ಮಂಡಲದ ಒಳಗೆ ಯುವಕ ಮಂಡಲ ಕಟ್ಟಡದ ಮಾಡಿನ ಅಡ್ಡೆಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media