ಮಂಗಳೂರು : ಸಿದ್ದರಾಮಯ್ಯನವರೇ, ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ನೀವು ಅಂದು ಎಸ್ಡಿಪಿ, ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳಿಗೆ ಸೇರಿದ 1600 ಸಮಾಜಘಾತುಕರ ವಿರುದ್ದ ಇದ್ದ 175 ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಮಾಡಿ, ಅಪರಾಧಿಗಳನ್ನು ಖುಲಾಸೆಗೊಳಿಸಿದಿರಿ. ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ
ಆದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಂತಹ ವಿಷಬೀಜಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು, ಆ ಗಲಭೆಗಳಿಗೆ ಕಾರಣರಾದವರಿಂದಲೇ ನಷ್ಟ ಭರ್ತಿ ಮಾಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಸಮಾಜಘಾತುಕರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.
Follow us on Social media